ಶುಕ್ರವಾರ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿಮಾತೃವಂದನಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿ ಬಾರಕೂರು ಎನ್ .ಆರ್ .ದಾಮೋದರ ಶರ್ಮ ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ಸಂಸ್ಕೃತಿಯಲ್ಲಿತಂದೆ ತಾಯಿಯರಿಗೆ ಪೂಜ್ಯನೀಯ ಸ್ಥಾನವಿದೆ. ಇವರನ್ನು ಪ್ರತ್ಯಕ್ಷ ದೇವರೆಂದೇ ಒಪ್ಪಿ ಆಧರಿಸಿ ಗೌರವಿಸುವ ಪರಂಪರೆ ನಮ್ಮದು. ತಾಯಿಯನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡುವುದರ ಜೊತೆಗೆ ತಂದೆಯನ್ನು ಅತ್ಯಂತ ಗೌರವದಿಂದ ಕಾಣಬೇಕು.. ಹೆತ್ತ ತಾಯಿಯ ಋುಣ ಹಾಗೂ ಹೊತ್ತ ನೆಲದ ಋುಣ ತೀರಿಸಲಾಗದ ಸಂಪತ್ತಾಗಿದೆ. ಮಕ್ಕಳು ಸಂಸ್ಕಾರಯುತರಾಗಿ ಬೆಳೆದಾಗ ಸಮಾಜದಲ್ಲಿನ ಉನ್ನತ ಸ್ಥಾನಮಾನಗಳು ಹಾಗೂ ಗೌರವ ದೊರಕಿ ಬದುಕು ಪಾವನವಾಗುತ್ತದೆ ಎಂದರು. ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್ .ಶೆಟ್ಟಿ ಮಾತನಾಡಿ ಮಾತೃ ಪಿತೃ ಸೇವೆಯಿಂದ ಸಿಗುವ ಪುಣ್ಯ ಫಲವನ್ನು ಅಳೆಯುವುದಕ್ಕೆ ಯಾವ ಮಾನದಂಡವು ಇಲ್ಲಎಂದರು. ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಡಾ. ರೂಪಾ ಶೆಣೈ ಸ್ವಾಗತಿಸಿದರು. ಡಾ. ಕೃಷÜ್ಣರಾಜ ಕರಬ ನಿರ್ವಹಿಸಿದರು. ಸುಮಲತಾ ವಂದಿಸಿದರು.ಪೋಟೊ//9ಕೆ-ಕೆಯುಎನ್ //. ಎನ್ .ಆರ್ .ದಾಮೋದರ ಶರ್ಮ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿದರು.