ಜಿಲ್ಲಾದ್ಯಂತ ಇಂದಿನಿಂದ ಶರನ್ನವರಾತ್ರಿ ಸಂಭ್ರಮ

Contributed by: saleem.balabatti@timesofindia.com|Vijaya Karnataka•
sharannavaratri festival old banashankari tulja bhavani and special chariot festival
ಜಿಲ್ಲಾದ್ಯಂತ ಇಂದಿನಿಂದ ಶರನ್ನವರಾತ್ರಿ ಸಂಭ್ರಮ (ಹೆಡ್ )

ದೇವಸ್ಥಾನಗಳಲ್ಲಿಘಟಸ್ಥಾಪನೆ, ವಿಶೇಷ ಪೂಜೆ, ಐತಿಹಾಸಿಕ ರಥೋತ್ಸವಕ್ಕೆ ಸಿದ್ಧತೆ (ಕಿಕ್ಕರ್ )
ವಿಕ ಸುದ್ದಿಲೋಕ ಗದಗ

ಜಿಲ್ಲಾದ್ಯಂತ ಶರನ್ನವರಾತ್ರಿ ಉತ್ಸವಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿದ್ದು, ವಿವಿಧ ದೇವಸ್ಥಾನಗಳಲ್ಲಿಘಟಸ್ಥಾಪನೆ, ವಿಶೇಷ ಪೂಜೆ, ದೇವಿ ಪುರಾಣ ಪ್ರವಚನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಶರನ್ನವರಾತ್ರಿ ಅಂಗವಾಗಿ 9 ದಿನಗಳ ಕಾಲ ಬೆಟಗೇರಿಯ ಹಳೆ ಮತ್ತು ಹೊಸ ಬನಶಂಕರಿ ದೇವಸ್ಥಾನಗಳು, ಅಂಬಾಭವಾನಿ ದೇವಸ್ಥಾನ, ಹಳೆ ಸರಾಫ್ ಬಜಾರ್ ಸಮೀಪದ ಜಗದಂಬಾ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ , ವಿಭೂತಿ ಓಣಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ರಾಜೀವಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿಘಟಸ್ಥಾಪನೆ ನೆರವೇರಲಿದೆ. ದೇವಿಯ ಮೂರ್ತಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಹಸ್ರನಾಮಾವಳಿ ಪಾರಾಯಣ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.

ನಮ್ಮೂರ ದಸರಾ ಉತ್ಸವ :

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ನಗರದ ಜಗದಂಬಾ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ ಹಾಗೂ ವಿಠಲಾರೂಢ ಗುರುನಿರಂಜನಸ್ವಾಮಿ ಸಂಸ್ಥಾನಮಠದ ಅಂಬಾಭವಾನಿ ಮಂದಿರದಲ್ಲಿಅ.11ರಿಂದ 20ರವರೆಗೆ ನಮ್ಮೂರ ದಸರಾ ಉತ್ಸವ ಆಯೋಜಿಸಲಾಗಿದೆ.

ಪುರಾಣ ಪ್ರವಚನ: ಸಂಭಾಪೂರ ರಸ್ತೆಯ ಪುಟ್ಟರಾಜ ನಗರದ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಭಾನುವಾರ ಸಂಜೆ 5.30ಕ್ಕೆ ಶ್ರೀದೇವಿ ಪುರಾಣ ಪ್ರವಚನದ ಪ್ರಾರಂಭೋತ್ಸವ ನಡೆಯಲಿದೆ.

ಅ.11ರಿಂದ ಪ್ರತಿದಿನ ಸಂಜೆ 6ರಿಂದ 8ರವರೆಗೆ ಪ್ರವಚನ ನಡೆಯಲಿದೆ.ಅ.21ರಂದು ಬೆಳಗ್ಗೆ 10.30ಕ್ಕೆ ಪುರಾಣ ಮಂಗಲೋತ್ಸವ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ.

ಬೆಟಗೇರಿಯಲ್ಲಿಉತ್ಸವ :

ಬೆಟಗೇರಿಯ ಹಳೆ ಬನಶಂಕರಿದೇವಿ ದೇವಸ್ಥಾನದಲ್ಲಿಅ.11ರಿಂದ 21ರವರೆಗೆ ನವರಾತ್ರಿ ಉತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಭಾನುವಾರ ಸಂಜೆ ಘಟಸ್ಥಾಪನೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆಯೊಂದಿಗೆ ಉತ್ಸವ ಆರಂಭವಾಗಲಿದೆ. ಅ.11ರಿಂದ 19ರವರೆಗೆ ಪ್ರತಿದಿನ ಸಂಜೆ 7ಕ್ಕೆ ಪರೂತಪ್ಪ ಪ್ರಭಣ್ಣ ಗುತ್ತಿ ಅವರಿಂದ ಶ್ರೀದೇವಿ ಪುರಾಣ ಪಠಣ ನಡೆಯಲಿದೆ. ಅ.20ರಂದು ಪುರಾಣ ಮಂಗಲೋತ್ಸವ ಹಾಗೂ ಅ.21ರಂದು ಸಂಜೆ 5.30ಕ್ಕೆ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ.

ರಥೋತ್ಸವ : ಗದಗಿನ ಐತಿಹಾಸಿಕ ತ್ರಿಕೂಟೇಶ್ವರ ಮತ್ತು ವೀರನಾರಾಯಣ ದೇವಾಲಯಗಳ ನವರಾತ್ರಿ ವಾಹನೋತ್ಸವ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿಒಂದಾಗಿದೆ. ಚಾಲುಕ್ಯರ ಶಿಲ್ಪಕಲಾ ಪರಂಪರೆ ಹಾಗೂ ಶೈವ-ವೈಷ್ಣವ ಸಂಪ್ರದಾಯಗಳ ಸಾಮರಸ್ಯ ಪ್ರತಿಬಿಂಬಿಸುವ ಎರಡೂ ದೇವಾಲಯಗಳ ರಥಗಳು ನವರಾತ್ರಿಯ ದಿನಗಳಲ್ಲಿನಗರದ ಪ್ರಮುಖ ಬೀದಿಗಳಲ್ಲಿಸಂಚರಿಸುವುದು ವಿಶೇಷ.

ತ್ರಿಕೂಟೇಶ್ವರ ದೇವಾಲಯದ ಸರಸ್ವತಿ ಸನ್ನಿಧಿಯಲ್ಲಿವಿಶೇಷ ಅಲಂಕಾರ ಹಾಗೂ ವಿದ್ಯಾರ್ಥಿಗಳಿಂದ ಪುಸ್ತಕ ಪೂಜೆ ನಡೆಯಲಿದೆ. ಸುಮಾರು 18 ಅಡಿ ಎತ್ತರದ ರಥಗಳನ್ನು ಅರ್ಚಕರು ಮತ್ತು ಯುವಕ ಮಂಡಳಿ ಸದಸ್ಯರು ಶ್ರಮದಾನದ ಮೂಲಕ ಸಿದ್ಧಪಡಿಸುತ್ತಾರೆ. ಪ್ರತಿದಿನ ಸಂಜೆ ಹೊರಡುವ ರಥಗಳು ಹಳೆ ವೆಂಕಟೇಶ್ವರ ದೇವಾಲಯದ ಬಳಿ ಭೇಟಿಯಾಗುವ ಸಂಪ್ರದಾಯವಿದೆ. ರಥೋತ್ಸವದ ಬಳಿಕ ಮಂತ್ರಪುಷ್ಪ, ಅಷ್ಟಾವಧಾನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ವಿಜಯದಶಮಿಯಂದು ವಿವಿಧ ದೇವಾಲಯಗಳ ರಥಗಳು ಹಾಗೂ ದೇವಿಯರ ಪಾಲಕಿಗಳು ಬನ್ನಿಮುಡಿಯುವ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿವೆ. ಬಳಿಕ ಗದಗ-ಬೆಟಗೇರಿ ಅವಳಿ ನಗರದ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಂಭ್ರಮ ಹಂಚಿಕೊಳ್ಳುತ್ತಾರೆ.

10ಜಿಡಿಜಿ8-

ಗದಗ ರೈಲ್ವೆ ಕ್ವಾಟರ್ಸ್ ನಲ್ಲರುವ ದುರ್ಗಾದೇವಿ ದೇವಸ್ಥಾನ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿರುವುದು.