ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನ ಕ್ಷೇತ್ರಪಾಲ ಗುಡಿಯ ನಿರ್ಮಾಣಕ್ಕೆ ದಾನಿಗಳು ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯದುನಾರಾಯಣ ಶೆಟ್ಟಿಯವರಿಗೆ ಮತ್ತು ಶಿಲ್ಪಿಗಳಿಗೆ ಶ್ರೀ ದೇವರ ಪ್ರಸಾದ ನೀಡುವ ಮೂಲಕ ಭಾನುವಾರ ಚಾಲನೆ ನೀಡಲಾಯಿತು.ಅರ್ಚಕ ಗೋಪಾಲಕೃಷ್ಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಯದುನಾರಾಯಣ ಶೆಟ್ಟಿ, ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಕಾಣಬೇಕಾದರೆ ಭಕ್ತರ ಸಹಕಾರ ಅಗತ್ಯ. ಬಪ್ಪನಾಡು ದೇವಳದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಚಾಲನೆ ದೊರಕಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಅಭಿವೃದ್ಧಿ ಕೆಲಸಕ್ಕೆ ಮರದ ಅಗತ್ಯವಿದ್ದು, ಭಕ್ತರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಅರ್ಚಕ ಪ್ರಸಾದ್ ಭಟ್ , ದೇವಸ್ಥಾನದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕ್ಷೇತ್ರದ ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅತುಲ್ ಕುಡ್ವ, ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ, ಸದಸ್ಯರಾದ ರಾಮಚಂದ್ರ ನಾಯ್ಕ ಕೊಲ್ನಾಡುಗುತ್ತು, ಸಂಜೀವ ದೇವಾಡಿಗ, ಉದ್ಯಮಿ ಕಿರಣ್ ಕುಮಾರ್ ಶೆಟ್ಟಿ ಕೊಲ್ನಾಡುಗುತ್ತು, ಸುಜಿತ್ ಆಳ್ವ ಆದ್ಯಪಾಡಿ ಕೊಲ್ನಾಡುಗುತ್ತು, ವಿದ್ಯಾಧರ್ ಶೆಟ್ಟಿ ಕೊಲ್ನಾಡುಗುತ್ತು, ವಿಶ್ವನಾಥ ಗೇರುಕಟ್ಟೆ, ಚರಣ್ ಶೆಟ್ಟಿ ಕಡವಿನಬಾಗಿಲು, ಉದಯಕುಮಾರ್ ಶೆಟ್ಟಿ ಅಧಿದನ್ , ವಿನೋದ್ ಸಾಲ್ಯಾನ್ ಬೆಳ್ಳಾಯರು, ನಾಗರಾಜ್ ಬಪ್ಪನಾಡು, ದಿನೇಶ್ ಸುವರ್ಣ ಬೆಳ್ಳಾಯರು, ಪ್ರಮೋದ್ ಶೆಟ್ಟಿ, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ, ಶಿಲ್ಪಿ ಸುಬ್ರಮಣ್ಯ ಉಪಸ್ಥಿತರಿದ್ದರು.
ಫೋಟೋ:11ಎಮ್ ಎಲ್ ಕೆ1
ಶ್ರೀ ಕ್ಷೇತ್ರ ಬಪ್ಪನಾಡು ದೇವಳದ ಶ್ರೀ ಕ್ಷೇತ್ರಪಾಲ ಗುಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.