ಕೇಂದ್ರದ ಜನವಿರೋಧಿ ನೀತಿಗೆ ಜನರ ತಕ್ಕ ಪಾಠ: ಲಾಡ್

Contributed by: Kashappa.Karadin@timesgroup.com|Vijaya Karnataka•
why are youth fighting against the prime minister of the country
ವಿಕ ಸುದ್ದಿಲೋಕ ಹುಬ್ಬಳ್ಳಿ

ಕೇಂದ್ರ ಸರಕಾರದ ಜನವಿರೋಧಿ ನೀತಿಗಳಿಗೆ ಮುಂಬರುವ ದಿನಗಳಲ್ಲಿದೇಶದ ಯುವಕರು ಹಾಗೂ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ನಗರದಲ್ಲಿಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿಚುನಾವಣಾ ವ್ಯವಸ್ಥೆ, ಎಥೆನಾಲ್ ಆಮದು ನೀತಿ, ಕಬ್ಬು ಬೆಳೆಗಾರರ ಸಂಕಷ್ಟ ಹಾಗೂ ಕೇಂದ್ರ ಸರಕಾರದ ಆಡಳಿತ ವೈಖರಿಯ ವಿರುದ್ಧ ವಾಗ್ದಾಳಿ ನಡೆಸಿದರು.

‘‘ವೋಟ್ ಚೋರಿ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಮರ ಸಾರಲಾಗಿದೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಿಂದ ಸಿಜೆಐ ಅವರನ್ನು ಹೊರಗಿಟ್ಟು ಪಾರ್ಲಿಮೆಂಟ್ ನಲ್ಲಿಕಾನೂನು ತಂದಿರುವುದನ್ನು ಪ್ರಶ್ನಿಸಬೇಕಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳಲ್ಲಿಮತದಾರರ ಪಟ್ಟಿಯಲ್ಲಿಲಕ್ಷಾಂತರ ವೋಟುಗಳು ಅತಿ ಕಡಿಮೆ ಅವಧಿಯಲ್ಲಿಹೆಚ್ಚಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಡಿಜಿಟಲ್ ಫಾಮ್ರ್ಯಾಟ್ ನಲ್ಲಿವೋಟರ್ ಲಿಸ್ಟ್ ಸಿಗದಂತೆ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ’’ಎಂದು ಆರೋಪಿಸಿದರು.

ಎಥೆನಾಲ್ ಆಮದು

ಕೇಂದ್ರ ಸಚಿವ ನಿತಿನ್ ಗಡ್ಕರಿ ಕಬ್ಬು ಬೆಳೆಗಾರರಿಂದ ಎಥನಾಲ್ ಖರೀದಿಸುವುದಾಗಿ ಭರವಸೆ ನೀಡಿ, ಅಮೆರಿಕದಿಂದ ಬಿಲಿಯನ್ ಗಟ್ಟಲೇ ಲೀಟರ್ ಎಥೆನಾಲ್ ಆಮದು ಮಾಡಿಕೊಂಡಿದ್ದು ಏಕೆ ?ಎಂದು ಪ್ರಶ್ನಿಸಿದರು. ಪೆಟ್ರೋಲ್ ನಲ್ಲಿಶೇ. 20ರಷ್ಟು ಎಥನಾಲ್ ಬೆರೆಸುತ್ತಿದ್ದರೂ, ಕಚ್ಚಾ ತೈಲ ಬೆಲೆಯಲ್ಲಿಇಳಿಕೆಯಾಗಿರುವ ಲಾಭ ಹಾಗೂ ಎಥನಾಲ್ ಮಿಶ್ರಣದಿಂದ ಬರುವ ಹಣ ಗ್ರಾಹಕರು ಮತ್ತು ರೈತರಿಗೂ ಏಕೆ ತಲುಪುತ್ತಿಲ್ಲ. ಪ್ರಹ್ಲಾದ್ ಜೋಶಿ ಅವರು ಕಲ್ಲಿದ್ದಲು ಸಚಿವರಾಗಿದ್ದ ಅವಧಿಯಲ್ಲಿಕೋಲ್ ಬ್ಲಾಕ್ ಹಂಚಿಕೆಗಳ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ’’ಎಂದು ಟೀಕಿಸಿದರು.

ಬರ ನಿರ್ವಹಣೆಗೆ ಅನುದಾನ

ಇಡೀ ರಾಜ್ಯ ಹಾಗೂ ಧಾರವಾಡ ಜಿಲ್ಲೆಯಲ್ಲಿತೀವ್ರ ಪ್ರಮಾಣದ ಬರಗಾಲವಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಸಮಸ್ಯಾತ್ಮಕ ಪ್ರದೇಶಗಳಲ್ಲಿಟ್ಯಾಂಕರ್ ಗಳ ವ್ಯವಸ್ಥೆ ಕಲ್ಪಿಸಲು ಮತ್ತು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.