ಕ್ರೈಂ)) 1.13 ಲಕ್ಷ ರೂ. ವರ್ಗಾವಣೆ: ಕೇಸು

Contributed by: vijaya.poojary@timesgroup.com|Vijaya Karnataka•
bank fraud case 113 lakhs transferred illegally from account
ವಿಕ ಸುದ್ದಿಲೋಕ ಮಂಗಳೂರು

ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1.13 ಲಕ್ಷ ರೂ. ವರ್ಗಾವಣೆಯಾಗಿರುವ ಬಗ್ಗೆ ಸೆನ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
42 ವರ್ಷದ ದೂರುದಾರರು ಅಕ್ಕಸಾಲಿಗನಾಗಿ ಕೆಲಸ ಮಾಡಿಕೊಂಡಿದ್ದಾರೆ. ಅ.5ರಂದು ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿದಾಗ ಯುಪಿಐ ಮೂಲಕ ಸೆ.25ರಂದು 98,999 ರೂ. ಮತ್ತು ಸೆ.7ರಂದು 41,800 ರೂ. ರೂ. ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಒಟ್ಟು ರೂ 1,13,799 ರೂ. ವನ್ನು ಅಪರಿಚಿತರು ವರ್ಗಾಯಿಸಿದ್ದಾರೆ.

ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿಆಗ್ರಹಿಸಿದ್ದಾರೆ.