ಮೆಟ್ರೊ ಹಳಿಗಿಳಿದ ವ್ಯಕ್ತಿ: ಸಂಚಾರ ಸ್ಥಗಿತ

Contributed by: mahyurgh@gmail.com|Vijaya Karnataka•
bengaluru metro elderly person falls passengers face disruption
ವಿಕ ಸುದ್ದಿಲೋಕ ಬೆಂಗಳೂರು

ನಮ್ಮ ಮೆಟ್ರೊದ ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳ ನಡುವಿನ ಹಳಿಗೆ ವ್ಯಕ್ತಿಯೊಬ್ಬ ಇಳಿದ ಹಿನ್ನೆಲೆಯಲ್ಲಿಕೆಲ ಹೊತ್ತು ರೈಲುಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ರಾತ್ರಿ 8.15ರ ಹೊತ್ತಿಗೆ ಮೆಟ್ರೊ ಹಳಿಗೆ ಅವರು ಇಳಿದಿದ್ದಾರೆ. ಇದರಿಂದಾಗಿ 8.30ರವರೆಗೆ ವಿಜಯನಗರ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೊ ರೈಲು ಸಂಚಾರದಲ್ಲಿತಾತ್ಕಾಲಿಕ ವ್ಯತ್ಯಯ ಉಂಟಾಯಿತು. ಈ ಅವಧಿಯಲ್ಲಿಕೆಲವು ಮೆಟ್ರೊ ರೈಲುಗಳ ಸಂಚಾರವನ್ನು ಅಲ್ಪಕಾಲ ತಡೆಹಿಡಿಯಲಾಗಿತ್ತು. ಬಳಿಕ ನೇರಳೆ ಮಾರ್ಗದಾದ್ಯಂತ ಮೆಟ್ರೊ ರೈಲು ಸಂಚಾರವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿತು. ಈ ಅವಧಿಯಲ್ಲಿಉಂಟಾದ ರೈಲುಗಳ ವಿಳಂಬಂದಿಂದ ಪ್ರಯಾಣಿಕರಿಗೆ ಅನಾನುಕೂಲವಾಯಿತು