ವಿಕ ಸುದ್ದಿಲೋಕ ಮಂಡ್ಯಮದ್ದೂರು ತಾಲೂಕು ಕಾಡುಕೊತ್ತನಹಳ್ಳಿ ಗ್ರಾಮದಲ್ಲಿಅ.18ರಂದು ನಿವೃತ್ತ ಆರೋಗ್ಯ ನಿರೀಕ್ಷಕ, ದಿವಂಗತ ಮಂಜುನಾಥ್ ಅವರ ಸ್ಮರಣಾರ್ಥ ಉಚಿತವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಮೈಸೂರಿನ ಅಪೋಲೊ ಆಸ್ಪತ್ರೆ ಸಹಯೋಗದಲ್ಲಿಗ್ರಾಮದ ಸರಕಾರಿ ಶಾಲೆ ಆವರಣದಲ್ಲಿಸಂಘಟಿಸಿರುವ ಈ ಶಿಬಿರದಲ್ಲಿಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ಜನರ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಶಿಬಿರದ ಆಯೋಜಕ ಡಾ.ಮಾದೇಶ್ ಮಂಜುನಾಥ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಮಂಡ್ಯದ ಎಸ್ .ಡಿ.ಜಯರಾಮ್ ಆಸ್ಪತ್ರೆಯ ವೈದ್ಯ ಡಾ.ಮಾದೇಶ್ ಮಂಜುನಾಥ್ , ಬೆಸಗರಹಳ್ಳಿಯ ವೈದ್ಯ ಡಾ.ಕಿರಣ್ ಕುಮಾರ್ ನೇತೃತ್ವದಲ್ಲಿನಡೆಯಲಿದೆ. ಉಚಿತವಾಗಿ ಇಸಿಜಿ, ಬಿಪಿ ತಪಾಸಣೆ, ಸಕ್ಕರೆ ಕಾಯಿಲೆ, ಮೂಳೆಸಾಂದ್ರತೆ ಪರೀಕ್ಷೆ ಮಾಡಲಾಗುವುದು. ಜತೆಗೆ, ನುರಿತ ತಜ್ಞ ವೈದ್ಯರು, ಸ್ತ್ರೀರೋಗಗಳ ತಜ್ಞರು ಜನರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು. ಆಸಕ್ತರು ವಿವರಕ್ಕೆ ಮೊ: 8762079460 ಸಂಪರ್ಕಿಸಬಹುದು ಎಂದಿದ್ದಾರೆ.
ಇದೇ ವೇಳೆ ಅಪ್ಪನ ದೇವಾಲಯಕ್ಕೆ ಪುಷ್ಪಾರ್ಚನೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ ್ಯಕ್ರಮಗಳ ಪ್ರದರ್ಶನವೂ ನಡೆಯಲಿದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಅವರು ಶಿಬಿರಕ್ಕೆ ಚಾಲನೆ ನೀಡುವರು. ವಿಧಾನ ಪರಿಷತ್ತ ಮಾಜಿ ಸದಸ್ಯ ಡಿ.ಎಸ್ .ವೀರಯ್ಯ, ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್ .ರವಿಕಾಂತೇಗೌಡ, ಸಂಗೀತ ನಿರ್ದೇಶಕ ವಿ.ಮನೋಹರ್ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಹಾಗೂ ಇತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
..............................
30ಕ್ಕೆ ಸರಕಾರಿ ನೌಕರರ ಸಭೆ
ಮಂಡ್ಯ: ಜಿಲ್ಲಾಸರಕಾರಿ ನೌಕರರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅ.30ರಂದು ಕರೆಯಲಾಗಿದೆ.
ಸಂಘದ ಅಧ್ಯಕ್ಷ ಕೆ.ನಾಗೇಶ್ ಅಧ್ಯಕ್ಷತೆಯಲ್ಲಿಅಂದು ಸಂಜೆ 5.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಸಂಘದ ಕಚೇರಿ ಆವರಣದಲ್ಲಿಸಭೆ ಆರಂಭಗೊಳ್ಳಲಿದೆ. ಸಂಘದ ರಾಜ್ಯ ಕಾರಾರ ಯಧ್ಯಕ್ಷ ಎಸ್ .ಶಂಭೂಗೌಡ ಹಾಗೂ ಸಂಘದ ಜಿಲ್ಲಾಪದಾಧಿಕಾರಿಗಳು ಭಾಗವಹಿಸುವರು ಎಂದು ಸಂಘದ ಕಾರ ್ಯದರ್ಶಿ ವಿಜಯಕುಮಾರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಸಭೆಯಲ್ಲಿಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಸರಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.