ಅಪ್ರಾಪ್ತನ ಕೊಲೆ

Contributed by: MANJUNATHA S|Vijaya Karnataka•
minor murder a disturbing and outrageous incident
ವಿಕ ಸುದ್ದಿಲೋಕ ಬೆಂಗಳೂರು

ಅಪರಿಚಿತ ದುಷ್ಕರ್ಮಿಗಳು ಅಪ್ರಾಪ್ತನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಘಟನೆ ಎಚ್ ಎಎಲ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.
ವಿಭೂತಿಪುರ ಕೆರೆಯ ಅಂಗಳದಲ್ಲಿಸೋಮವಾರ ಮುಂಜಾನೆ ಬಾಲಕನ ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲಕನ ಗುರುತು ಸಿಗದಂತೆ ತಲೆ ಹಾಗೂ ಮುಖವನ್ನು ಜಜ್ಜಿ ಬರ್ಬರವಾಗಿ ಕೊಲೆಗೈದಿರುವುದು ಕಂಡು ಬಂದಿತ್ತು.

ಹಲವು ಆಯಾಮಗಳಲ್ಲಿತನಿಖೆ ನಡೆಸಿ ಕೊಲೆಯಾದ ಬಾಲಕನ ಗುರುತು ಪತ್ತೆ ಹಚ್ಚಲಾಗಿದೆ. ಆಟೋ ಚಾಲಕ ದಂಪತಿಯ ಪುತ್ರ 13 ವರ್ಷದ ಬಾಲಕ ಕೊಲೆಯಾಗಿದ್ದಾನೆ. ಭಾನುವಾರ ತಡರಾತ್ರಿ ಕೊಲೆ ನಡೆದಿರುವ ಶಂಕೆಯಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಆರೋಪಿಗಳ ಸೆರೆಸಿಕ್ಕ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.