ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಜ್ಜಾಗಿರುವ ಉನ್ನತ ಶಿಕ್ಷಣ ಇಲಾಖೆಯು, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ, ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಪರಿಚಯಿಸುತ್ತಿದೆ.
ಅತಿ ಹೆಚ್ಚು ಬೇಡಿಕೆಯಿರುವ ಕ್ಷೇತ್ರಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಯೋಜನೆ ರೂಪಿಸಲಾಗಿದೆ. ಗೇಮ್ ಹಬ್ , ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಮೂಲಕ ಉದ್ಯೋಗ ಸೃಜನೆಗೆ ವೇದಿಕೆ ಸೃಷ್ಟಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ ಉದ್ಯೋಗ ಜಗತ್ತಿನಲ್ಲಿಅತಿ ಹೆಚ್ಚು ಬೇಡಿಕೆಯಿರುವ ತಂತ್ರಜ್ಞಾನಗಳನ್ನು ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಕಲಿಸಲು ಹೊರಟಿರುವ ಇಲಾಖೆ, ಎಐ, ಗೇಮ್ ಹಬ್ ಮೂಲಕ ಉದ್ಯೋಗಾವಕಾಶ ನೀಡುವ ತರಬೇತಿ ಪರಿಚಯಿಸಲು ಮುಂದಾಗಿದೆ. ಬೆಂಗಳೂರಿನ ಕೃಷ್ಣರಾಜೇಂದ್ರ ಸಿಲ್ವರ್ ಜೂಬಿಲಿ ತಾಂತ್ರಿಕ ಮಹಾವಿದ್ಯಾಲಯದಲ್ಲಿಎಐ ಮತ್ತು ಗೇಮಿಂಗ್ ಹಬ್ ಸ್ಥಾಪಿಸಲು ತಯಾರಿ ನಡೆದಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿನ ಕೌಶಲ್ಯಗಳನ್ನು ಕಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಗೇಮಿಂಗ್ ಹಬ್ ಮೂಲಕ ಎಐ ತಂತ್ರಜ್ಞಾನ ಹಾಗೂ ಗೇಮಿಂಗ್ ತಂತ್ರಜ್ಞಾನದ ಪ್ರಾಯೋಗಿಕ ಕಲಿಕೆ ಸಾಧ್ಯವಾಗಲಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ. ಎಚ್ ಪಿ ಕಂಪನಿಯ ಸಹಯೋಗದಲ್ಲಿಗೇಮಿಂಗ್ ಹಬ್ ನಿರ್ಮಾಣಕ್ಕೆ ಇಲಾಖೆ ಆಸಕ್ತಿ ತೋರಿದ್ದು, ಇದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವರದಾನವಾಗುವ ನಿರೀಕ್ಷೆಯಿದೆ.
ಎಂಜಿನಿಯರಿಂಗ್ ವ್ಯಾಸಂಗದ ಜತೆಗೆ, ಬೇರೆ ಬೇರೆ ವಿಭಾಗಗಳ ವಿದ್ಯಾರ್ಥಿಗಳು ಒಂದೇ ಕಡೆ ಸೇರಿ ಕೌಶಲಗಳನ್ನು ಕಲಿಯಲು ಇದು ಸಹಕಾರಿಯಾಗಲಿದ್ದು, ಸ್ಟಾರ್ಟಪ್ ಗಳ ಆರಂಭ, ಗೇಮ್ ಡೆವಲಪರ್ ಉದ್ಯಮಗಳ ಆರಂಭಕ್ಕೂ ಇದು ಸಹಕಾರಿಯಾಗಲಿದೆ.
ಏನಿದು ಗೇಮಿಂಗ್ ಹಬ್ ?
ಗೇಮಿಂಗ್ ಜಗತ್ತಿನ ತಂತ್ರಜ್ಞಾನ, ಹೊಸ ಹೊಸ ಗೇಮ್ ಗಳ ನಿರ್ಮಾಣ, ಗೇಮ್ ಫಿಸಿಕ್ಸ್ , ಗ್ರಾಫಿಕ್ಸ್ ರೆಂಡರಿಂಗ್ ಸೇರಿ ಹಲವು ವಿಷಯಗಳನ್ನು ಕಲಿಸಲಾಗುತ್ತದೆ. ಸುಧಾರಿತ ಗ್ರಾಫಿಕ್ಸ್ ಕಾರ್ಡ್ , ಉತ್ಕೃಷ್ಟ ಕಂಪ್ಯೂಟರ್ ಗಳ ಬಳಕೆ ಮೂಲಕ ವಿದ್ಯಾರ್ಥಿಗಳಿಗೆ ಗೇಮಿಂಗ್ ವಿನ್ಯಾಸ, ಇ-ಸ್ಪೋರ್ಟ್ಸ್ ಸೇರಿ ಹಲವು ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ಸಿಗಲಿದೆ. ವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಕ್ಷೇತ್ರದಲ್ಲಿಹೆಚ್ಚು ಬೇಡಿಕೆಯಿದ್ದು, ಇದರ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ಸಿಗಲಿದೆ.
ಬಾಕ್ಸ್
ಯಾವೆಲ್ಲಹುದ್ದೆಗೆ ಅವಕಾಶ?
* ಗೇಮ್ ಡೆವಲಪರ್
* ಯುಐ, ಯುಎಕ್ಸ್ ಡಿಸೈನರ್
* 3ಡಿ ಅನಿಮೇಟರ್
* ಗೇಮ್ ಟೆಸ್ಟರ್
ಬಾಕ್ಸ್
ಕೆಲ ಕಡೆ ಶ್ರೇಷ್ಠತಾ ಕೇಂದ್ರ
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಜತೆಗೆ, ತಾಂತ್ರಿಕ ತರಬೇತಿ ನೀಡಲು ರಾಜ್ಯದ ಕೆಲ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿಶ್ರೇಷ್ಠತಾ ಕೇಂದ್ರ ಸ್ಥಾಪನೆಗೂ ಸಿದ್ಧತೆ ನಡೆದಿದೆ. ರಾಮನಗರ, ಹಾಸನ, ಕೆ.ಆರ್ .ಪೇಟೆ, ಚಾಮರಾಜನಗರ, ಕುಶಾಲನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದ್ದು, ಇಲ್ಲಿಹೈಬ್ರೀಡ್ ಎಂಜಿನ್ ಮತ್ತು ಪವರ್ ಟ್ರಾನ್ಸ್ ಮಿಷನ್ ಕ್ಷೇತ್ರಗಳಲ್ಲಿತರಬೇತಿ ನೀಡಲು ಯೋಜಿಸಲಾಗಿದೆ.
ಕೋಟ್ ..
ಸರಕಾರಿ ಕಾಲೇಜುಗಳಲ್ಲಿಕಲಿಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೌಶಲ ಒದಗಿಸುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸುವುದು ಇಲಾಖೆಯ ಗುರಿಯಾಗಿದೆ. ಕೆಲ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿವಿದ್ಯಾರ್ಥಿಗಳಿಗೆ ಕೌಶಲ, ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ.