ಆಧ್ಯಾತ್ಮ ಮಾರ್ಗದಲ್ಲಿಮಾತ್ರ ನಿಜ ಸಂತೋಷ ಲಭ್ಯ

Contributed by: chandregowda.n@timesofindia.com|Vijaya Karnataka•
true happiness is found only in spirituality
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿನಡೆದ 2ನೇ ನವರಾತ್ರಿ ಉತ್ಸವದಲ್ಲಿಪದ್ಮಶ್ರೀ ಗೌರಿಶಂಕರ್ ಅಭಿಮತ

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಗುರುವಿನ ಮಾರ್ಗದರ್ಶನದಲ್ಲಿಆಧ್ಯಾತ್ಮಿಕ ಮಾರ್ಗದಲ್ಲಿಮುನ್ನಡೆದರೆ ಮಾತ್ರ ನಿಜವಾದ ಸಂತೋಷದ ಅರಿವಾಗುತ್ತದೆ ಎಂದು ಶೃಂಗೇರಿ ಶಾರದಾ ಸಂಸ್ಥಾನದ ನಿಕಟಪೂರ್ವ ಧರ್ಮಾಧಿಕಾರಿ, ಪದ್ಮಶ್ರೀ ವಿ.ಆರ್ . ಗೌರಿಶಂಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿನಡೆಯುತ್ತಿರುವ ಶಾರದಾ ನವರಾತ್ರಿ ಕಾರ್ಯಕ್ರಮದ ಎರಡನೇ ದಿನವಾದ ಸೋಮವಾರ ಮಾತನಾಡಿದ ಅವರು, ಕ್ಷಣಿಕ ಸುಖದ ಆಸೆಯಿಂದ ಭೌತಿಕ ವಸ್ತುಗಳ ಸಂಪಾದನೆಗಾಗಿ ಮನುಷ್ಯರು ಹಲವು ವರ್ಷ ಕಷ್ಟಪಡುತ್ತಾರೆ. ಶಾಶ್ವತ ಸುಖ ಕೊಡುವ ಅಧ್ಯಾತ್ಮ ಜ್ಞಾನದ ಕಡೆಗೆ ಮನಸ್ಸು ಹರಿಯುವ ಹೊತ್ತಿಗೆ ಬಹಳ ತಡವಾಗಿರುತ್ತದೆ ಎಂದು ಹೇಳಿದರು.

ಮುದ್ದೇನಹಳ್ಳಿಯಲ್ಲಿಹತ್ತಾರು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಇಲ್ಲಿಸಾಮಾನ್ಯ ಮನುಷ್ಯರೂ ದೇವರೊಂದಿಗೆ ಸುಲಭವಾಗಿ ಬೆರೆಯಬಹುದಾದ ವಾತಾವರಣವಿದೆ. ಸದ್ಗುರುಗಳು ಸೇವೆಯನ್ನೂ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನಾಗಿಸಿದ್ದಾರೆ ಎಂದು ವಿವರಿಸಿದರು.

ತಮಿಳುನಾಡಿನ ಮದುರೈ ನಗರದ ಉದ್ಯಮಿ ಕೆ. ಹರಿ ತ್ಯಾಗರಾಜನ್ ಮಾತನಾಡಿ, ಎಲ್ಲರೊಳಗೆ ಇರುವ ಭಂಡಾಸುರರನ್ನು ಗೆಲ್ಲಲು ದುರ್ಗಾದೇವಿಯು ಸಹಾಯ ಮಾಡುತ್ತಾಳೆ. ಸರಸ್ವತಿ (ಜ್ಞಾನ), ಲಕ್ಷ್ಮೇ (ಸಂಪತ್ತು) ಮತ್ತು ದುರ್ಗಾ (ಧೈರ್ಯ) ರೂಪದಲ್ಲಿದೇವಿಯನ್ನು ನವರಾತ್ರಿ ಸಂದರ್ಭದಲ್ಲಿಪೂಜಿಸುತ್ತೇವೆ. ಇದರ ಒಳಾರ್ಥಗಳನ್ನು ಗ್ರಹಿಸಬೇಕು ಎಂದು ಸಲಹೆ ಮಾಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್ . ಅಶ್ವತ್ಥನಾರಾಯಣ ಮಾತನಾಡಿ, ನಮ್ಮ ನಿತ್ಯ ಕರ್ತವ್ಯಗಳನ್ನು ನಿರ್ವಹಿಸುವುದರ ಜತೆæ ನಾವೆಲ್ಲರೂ ಆಧ್ಯಾತ್ಮಿಕವಾಗಿಯೂ ಹೇಗೆ ಬಾಳು ಸಾಗಿಸಬೇಕು ಎನ್ನುವುದನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅದ್ಭುತವಾಗಿ ನಿರೂಪಿಸುತ್ತಿದ್ದಾರೆ. ಇಡೀ ಜಗತ್ತೇ ಒಂದು ಕುಟುಂಬ ಎನ್ನುವ ಸನಾತನ ಧರ್ಮದ ಆಶಯವನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ ಎಂದು ಶ್ಲಾಘಿಘಿಸಿದರು.

ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಕರ್ನಾಟಕದಲ್ಲಿಇಂದು ಬರಗಾಲದ ವಾತಾವರಣವಿದೆ. ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿ ದೇವಿಯಲ್ಲಿಪ್ರಾರ್ಥನೆ ಸಲ್ಲಿಸಿದರೆ ಅವಳ ಕೃಪೆಯಿಂದ ಖಂಡಿತ ಒಳ್ಳೆಯದಾಗುತ್ತದೆ ಎಂದು ಭರವಸೆ ನೀಡಿದರು.

ಪ್ರಶಾಂತಿ ಬಾಲಮಂದಿರ ಟ್ರಸ್ವ್ ಅಧ್ಯಕ್ಷ ಡಾ. ಬಿ.ಎನ್ . ನರಸಿಂಹಮೂರ್ತಿ ಮಾತನಾಡಿದರು.

ಬಾಕ್ಸ್

ಸಾವಿರಾರು ಮಹಿಳೆಯರಿಂದ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ

ನವರಾತ್ರಿಯ ಎರಡನೇ ದಿನವಾದ ಸೋಮವಾರ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆಯಲ್ಲಿಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಬಂದಿದ್ದ ಎಲ್ಲಭಕ್ತರಿಗೂ ಶ್ರೀ ಲಲಿತಾ ತ್ರಿಪುರಸುಂದರಿ ದೇವಿಯ ಚಿತ್ರಪಟ ಮತ್ತು ಕುಂಕುಮದ ಭರಣಿಗಳನ್ನು ನೀಡಿ ನಿಗದಿತ ಆಸನಗಳಲ್ಲಿಕೂರಿಸಲಾಯಿತು. ಶೃಂಗೇರಿಯಿಂದ ಬಂದಿದ್ದ ಋುತ್ವಿಜರು ಸಹಸ್ರನಾಮವನ್ನು ಪಾರಾಯಣ ಮಾಡುತ್ತಿರುವಾಗ ಮಹಿಳೆಯರು ಶ್ರದ್ಧೆಯಿಂದ ಕುಂಕುಮಾರ್ಚನೆ ಮಾಡಿದರು.

ಬಾಕ್ಸ್

ಇಂದು ಆಶ್ಲೇಷ ಬಲಿ, ಪವಮಾನ ಹೋಮ

ಸತ್ಯ ಸಾಯಿ ಗ್ರಾಮದಲ್ಲಿನವರಾತ್ರಿಯ ಮೂರನೇ ದಿನವಾದ ಅ.13ರಂದು ಪವಮಾನ ಹೋಮ ಮತ್ತು ಆಶ್ಲೇಷ ಬಲಿ ಧಾರ್ಮಿಕ ವಿಧಿಗಳು ನೆರವೇರಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

12ಸಿಬಿಪಿಫೋಟೋ02

ಅಲಂಕೃತ ದುರ್ಗಾ ದೀಪಸ್ತಂಭಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಾರ್ಥನೆ ಸಲ್ಲಿಸಿದರು. ಮದುರೈ ಉದ್ಯಮಿ ಕೆ. ಹರಿ ತ್ಯಾಗರಾಜನ್ , ಮಾಜಿ ಉಪ ಮುಖ್ಯಮಂತ್ರಿ ಡಾ ಸಿ.ಎನ್ .ಅಶ್ವತ್ಥ ನಾರಾಯಣ, ಪ್ರಶಾಂತಿ ಬಾಲಮಂದಿರ ಟ್ರಸ್ವ್ ಅಧ್ಯಕ್ಷ ಡಾ ಬಿ.ಎನ್ .ನರಸಿಂಹಮೂರ್ತಿ ಉಪಸ್ಥಿತರಿದ್ದರು.