ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ: ಎಚ್ಚರಿಕೆ
ಉಪ್ಪಿನ ಬೆಟಗೇರಿ : ಉಪ್ಪಿನ ಬೆಟಗೇರಿ ಧಾರವಾಡ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದೇ ಜನ ಪರದಾಡುತ್ತಿದ್ದಾರೆ ಎಂದು ಗ್ರಾಮದ ಹಿರಿಯರಾದ ಜಿ.ಆರ್ .ಜವಳಗಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಗ್ರಾಮದಲ್ಲಿಪತ್ರಿಕಾಗೋಷ್ಠಿಯಲ್ಲಿಮಾತನಾಡಿ, 10-15 ದಿನಗಳಿಗೊಮ್ಮೆ ನೀರು ಪೂರೈಕೆಯಾದರೆ ಸಾಮಾನ್ಯ ಜನ ಹೇಗೆ ಜೀವನ ಮಾಡೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಸರಿಗೆ ಮಾತ್ರ 24* 7 ಎಂದಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಸಾಕಷ್ಟು ಬಾರಿ ಹೇಳಿದರೂ ಆಡಳಿತಾಧಿಕಾರಿ ಚಂದ್ರು ಪೂಜಾರ ಹಾಗೂ ಪಿಡಿಒ ಮಧುಸೂದನ ದೇಶಪಾಂಡೆ ಮನವಿಗೆ ಸ್ಪಂದಿಸುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.
ಅಬ್ದುಲಖಾದರ ದಡವಾಡ, ಬಸೀರಹ್ಮದ ಮಾಳಗಿಮನಿ ಮಾತನಾಡಿ, ಜನರ ಮೂಲ ಅವಶ್ಯಕತೆಗಳಿಗೆ ಸ್ಪಂದಿಸದ ಸ್ಥಳೀಯ ಆಡಳಿತದ ಕಾರ್ಯವೈಖರಿ ಬೇಸರ ತರಿಸಿದೆ. ಒಂದು ವಾರದೊಳಗೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಸಿಇಒ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿವೀರಣ್ಣಾ ಪರಾಂಡೆ, ಧರೆಪ್ಪ ಬೊಬ್ಬಿ, ಕಲ್ಲಪ್ಪ ಬೊಬ್ಬಿ, ಶಿವಾನಂದ ಹಟ್ಟಿ ಸೇರಿದಂತೆ ಹಲವರಿದ್ದರು.