ಲಿಂಗಸುಗೂರು- 10ನೇ ದಿನಕ್ಕೆ ಕಾಲಿರಿಸಿದ ಧರಣಿ

Contributed by: mkhussain.lgs@gmail.com|Vijaya Karnataka•
continuous protest in lingasugur village on the 10th day
10ನೇ ದಿನಕ್ಕೆ ಕಾಲಿರಿಸಿದ ಧರಣಿ

ಲಿಂಗಸುಗೂರು: ‘‘ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಬಳಿ ಹಾದು ಹೋಗಿರುವ ಹೆದ್ದಾರಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸಮರ್ಪಕ ಭೂ ಪರಿಹಾರ ಮೊತ್ತ ಬಿಡುಗಡೆಯಾಗಿಲ್ಲ,’’ ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಗುರುವಾರ 10ನೇ ದಿನಕ್ಕೆ ಕಾಲಿರಿಸಿದೆ. ದಲಿತ ಸಂರಕ್ಷ ಜಿಲ್ಲಾಹಾಗೂ ತಾಲೂಕು ಸಮಿತಿ ನೇತೃತ್ವದಲ್ಲಿನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ರಾಷ್ಟ್ರೀಯ ಹೆದ್ದಾರಿ 748 ಎ ಭಾರತ್ ಮಾಲಾ ಯೋಜನೆಯಲ್ಲಿಹತ್ತಾರು ಎಕರೆ ಭೂಮಿ ಕಳೆದುಕೊಂಡ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ರೈತರ ಮನವಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ,’’ ಎಂದು ರೈತ ಮುಖಂಡ ಹರಳಯ್ಯ ಎಚ್ಚರಿಕೆ ನೀಡಿದರು.
ದಸಂಸ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ, ತಾಲೂಕು ಅಧ್ಯಕ್ಷ ಕಿರಣಕುಮಾರ, ಪ್ರದೀಪ, ಮುತ್ತು, ಚಿನ್ನಪ್ಪ ರಾರಾವಿ, ವಿN್ನೕಶ ಹಿರೇನಗನೂರು, ಹುಚ್ಚಪ್ಪ, ಬಸವರಾಜ ಇದ್ದರು.

---

01ಆರ್ ಸಿಎಚ್ ಎಲ್ ಎನ್ ಜಿ3:

ಲಿಂಗಸುಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮ ಹೊರವಲಯದಲ್ಲಿನಡೆಯುತ್ತಿರುವ ಪ್ರತಿಭಟನೆ ಗುರುವಾರ 10ನೇ ದಿನಕ್ಕೆ ಕಾಲಿರಿಸಿದೆ.