ವಿಶ್ವ ಹೃದಯ ದಿನದ ನಿಮಿತ್ತ ಪಟ್ಟಣದ ಚರಾಟಿ ಅವರ ಶ್ರೀ ಸದಾನಂದ ಓಂಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬೃಹತ್ ಜಾಥಾದೊಂದಿಗೆ ಸಾರ್ವಜನಿಕರಲ್ಲಿಹೃದಯದ ಆರೋಗ್ಯ ಕುರಿತು ಮಂಗಳವಾರ ಜಾಗೃತಿ ಮೂಡಿಸಲಾಯಿತು.ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಅಜಿತ್ ಚರಾಟಿ ಹಾಗೂ ಚರ್ಮರೋಗ ತಜ್ಞ ಡಾ. ಕಾವೇರಿ ಚರಾಟಿ ಅವರ ಮಾರ್ಗದರ್ಶನದಲ್ಲಿಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣದ ವೀರ ಸಾವರ್ಕರ್ ನಗರದಲ್ಲಿರುವ ಆಸ್ಪತ್ರೆಯ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ , ಕೇಂದ್ರ ಬಸ್ ನಿಲ್ದಾಣ, ಬಸವ ವೃತ್ತ, ಹಾಗೂ ಕೆ.ಸಿ. ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿಸಾಗಿತು.
ಆಸ್ಪತ್ರೆಯ ಆಡಳಿತಾಧಿಕಾರಿ ಕಲಾವತಿ ಕಮತೆ, ಜಾಹೀರಾತು ಮುಖ್ಯಸ್ಥ ಪಂಕಜ ಸಣ್ಣಕ್ಕಿ, ವಿನಾಯಕ ಮಾನೆ, ಭಾಗ್ಯಶ್ರೀ ಮುತ್ತೂರ, ಸುವರ್ಣಾ ಕಾಂಬಳೆ, ಅಕ್ಷಯ ನಾಯಕ, ಸಾಗರ ಶಿವರಾಯ, ಆಸ್ಪತ್ರೆಯ ನಸಿಂರ್ ಗ್ ಸಿಬ್ಬಂದಿ ಹಾಗೂ ಸಿಎಲ್ ಇ ನಸಿಂರ್ ಗ್ ಕಾಲೇಜು ಮತ್ತು ಸ್ಪಂದನಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
-29ಸಿಕೆಡಿ 2
ವಿಶ್ವ ಹೃದಯ ದಿನದ ನಿಮಿತ್ತ ಚಿಕ್ಕೋಡಿಯಲ್ಲಿಚರಾಟಿ ಅವರ ಶ್ರೀ ಸದಾನಂದ ಓಂಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.