ನಾನಾ ಚಟುವಟಿಕೆ ಉದ್ಘಾಟನೆ ಇಂದು

Contributed by: BASAVARAJU KG|Vijaya Karnataka•
inauguration of frestopia 2k26 at winners first grade college
ನಾನಾ ಚಟುವಟಿಕೆ ಉದ್ಘಾಟನೆ ಇಂದು

ದಾವಣಗೆರೆ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಿಲ್ಲಾಪಂಚಾಯಿತಿ ಕಚೇರಿ ಎದುರಿರುವ ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿಅ.2ರಂದು ಬೆಳಗ್ಗೆ 10.30ಕ್ಕೆ ‘ಫ್ರೆಸ್ಟೋಪಿಯಾ-2ಕೆ26’, 2026-27ನೇ ಸಾಲಿನ ವಿದ್ಯಾರ್ಥಿಗಳ ಸಂಘ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿನ್ನರ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಶಿವರಾಜ್ ಕಬ್ಬೂರ್ ಅಧ್ಯಕ್ಷತೆಯಲ್ಲಿನಡೆಯುವ ಕಾರ್ಯಕ್ರಮವನ್ನು ದಾವಣಗೆರೆ ದಕ್ಷಿಣ ಶಾಸಕ ಸಮಥ್ ರ್ ಶಾಮನೂರು ಉದ್ಘಾಟಿಸುವರು. ದಾವಣಗೆರೆ ವಿವಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಪಿ.ನಂದೀಶ್ವರಪ್ಪ, ನಿವೃತ್ತ ಪ್ರಾಧ್ಯಾಪಕ ಡಾ.ಮಂಜುನಾಥ ಕುರ್ಕಿ, ಜಿಲ್ಲಾಗೃಹ ರಕ್ಷಕ ದಳದ ಬೋಧಕ ಎಂ.ಕರಿಬಸಪ್ಪ, ವಿನ್ನರ್ಸ್ ಪ್ರಥಮದರ್ಜೆ ಕಾಲೇಜು ಹಿರಿಯ ಪ್ರಾಧ್ಯಾಪಕ ಎಂ.ಎಚ್ .ಪ್ರಸನ್ನ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.