ಮೂಡಲಗಿ : ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಸಭಾ ಭವನದಲ್ಲಿಅ. 5ರಂದು ಬೆಳಗ್ಗೆ 10 ಗಂಟೆಗೆ ಸಾಹಿತಿ ಬಸವರಾಜ ಕಟ್ಟೀಮನಿ ಜಯಂತ್ಯುತ್ಸವ ಹಾಗೂ ಸಾಹಿತಿ ಮಹಾಲಿಂಗ ಮಂಗಿ ಅವರ ’ಬಾಳದಾರಿಯಲ್ಲಿ’ ಮತ್ತು ’ಬಾಳಬಂಡಿ’ ಸಂಕಥನಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿವೆ. ಎಸ್ ಆರ್ ಇ ಸಂಸ್ಥೆಯ ಚೇರಮನ್ ಬಸಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಪ್ರೊ. ಚಂದ್ರಶೇಖರ ಅಕ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಬಿ.ಆರ್ . ಪೊಲೀಸ್ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಪ್ರೊ. ಎ.ವೈ. ಪಂಗಣ್ಣವರ, ಪ್ರೊ. ಶಿವಾನಂದ ಬೆಳಕೂಡ ಹಾಗೂ ವಿಶ್ರಾಂತ ಗ್ರಂಥಪಾಲಕ ಬಾಲಶೇಖರ ಬಂದಿ ಭಾಗವಹಿಸಲಿದ್ದಾರೆ. 2026ರ ಕಾಮನ್ ವೆಲ್ತ್ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿಚಿನ್ನದ ಪದಕ ಮುಡಿಗೇರಿಸಿಕೊಂಡ ಕಾಲೇಜಿನ ವಿದ್ಯಾರ್ಥಿ ಸಚಿನ್ ಸಾಳುಂಕೆ ಅವರನ್ನು ಸನ್ಮಾನಿಸಲಾಗುವುದು.