ಕಾಸರಗೋಡು: ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿಯಲ್ಲಿಕಾಸರಗೋಡು ಪೇಟೆಯಿಂದ ಜಣದಟ್ಟಣೆ ಹೆಚ್ಚು ಇರುವ ರಸ್ತೆ ಬದಿ ಕಾಲ್ನಡೆಪ್ರಯಾಣಿಕರಿಗೆ ಫುಟ್ ಪಾತ್ ಸೌಕರ್ಯ ಇಲ್ಲದಿರುವುದು ಸಮಸ್ಯೆಯಾಗುತ್ತಿದೆ.
ನೂರಾರು ವಿದ್ಯಾರ್ಥಿಗಳು, ನಗರ ನಿವಾಸಿಗಳು ಪೇಟೆಗೆ ಕಾಲ್ನಡೆಯಾಗಿ ಬರಬೇಕಾದರೆ ಫುಟ್ ಪಾಥ್ ಸೌಕರ್ಯವಿಲ್ಲ. ಬೆಳಗ್ಗಿನ ವ್ಯಾಯಾಮಕ್ಕಾಗಿ ನಡೆದುಕೊಂಡು ಹೋಗುವ ನಗರ ನಿವಾಸಿಗಳು ಸಮಸ್ಯೆ ಅನುಭವಿಸುವಂತಾಗಿದೆ. ರಸ್ತೆಯ ಡ್ರೈನೇಜ್ ವ್ಯವಸ್ಥೆಯ ಮೇಲೆ ಕಾಂಕ್ರೀಟ್ ಸ್ಲಾತ್ರ್ಯಬ್ ಗಳಿದ್ದರೂ ಅವುಗಳಲ್ಲಿಕಾಡುಬೆಳೆದಿದೆ. ರಾಜ್ಯ ಹೆದ್ದಾರಿಯಾದ ಕಾರಣ ನಗರ ಪ್ರದೇಶದಲ್ಲಾದರೂ ಫುಟ್ ಪಾತ್ ನಿರ್ಮಿಸಬೇಕಿತ್ತು. ಹಲವಾರು ಬಾರಿ ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿಯಲ್ಲಿನವೀಕರಣ ಕಾಮಗಾರಿಗಳು ನಡೆಯುತ್ತಿದ್ದರೂ ಅಧಿಕಾರಿಗಳು ಫುಟ್ ಪಾತ್ ಕಡೆಗಣಿಸುತ್ತಿದ್ದಾರೆ. ಇದೇ ಸಂದರ್ಭ ಕಾಞಂಗಾಡು ನಗರ ವ್ಯಾಪ್ತಿಯಲ್ಲಿಫುಟ್ ಪಾತ್ ಸೌಕರ್ಯವಿದೆ. ಹೆಚ್ಚಿನ ಸಂಚಾರದಟ್ಟಣೆ ಇರುವ ಕೆಎಸ್ ಆರ್ ಟಿಸಿ ಸಹಿತ ನೂರಾರು ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿಪಾದಚಾರಿ ರಸ್ತೆ ನಿರ್ಮಿಸಬೇಕು ಎಂದು ನಗರ ನಿವಾಸಿಗಳು, ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.ಚಿತ್ರ: 27ಕೆಎಸ್ ಎಲ್ ಹೆದ್ದಾರಿ- ಕಾಸರಗೋಡು ಡ್ರೈನೇಜ್ ವ್ಯವಸ್ಥೆಯ ಮೇಲಿರುವ ಸ್ಲಾತ್ರ್ಯಬ್ ಗಳಲ್ಲಿಕಾಡುಪೊದೆಗಳು ಬೆಳೆದಿರುವುದು.