ವಿದ್ಯಾರ್ಥಿಗಳು ಮಹೋನ್ನತ ಗುರಿ ಹಾಗೂ ಉದಾತ್ತ ಧ್ಯೇಯದೊಂದಿಗೆ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ವಿಶ್ವನಾಥ ಚೌಗಲಾ ಸಲಹೆ ನೀಡಿದರು.ತಾಲೂಕಿನ ಅಂಕಲಿ ಗ್ರಾಮದ ಕೆಎಲ್ ಇ ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಪೂರ್ವ ಕಾಲೇಜಿನಲ್ಲಿಸೋಮವಾರ ಹಮ್ಮಿಕೊಳ್ಳಲಾದ ಪೋಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ‘‘ಯುವಜನ ಹಾಗೂ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ, ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಕುಟುಂಬಕ್ಕೆ ಹಾಗೂ ಕಲಿತ ಸಂಸ್ಥೆಗೂ ಕಳಂಕ ತಗಲುತ್ತದೆ,’’ ಎಂದು ಕಳವಳ ವ್ಯಕ್ತಪಡಿಸಿದರು.
ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಸುಬ್ಬರಾವ್ ಎಂಟೆತ್ತಿನವರ ಮಾತನಾಡಿದರು. ಪ್ರಾಚಾರ್ಯ ಪಿ.ಎನ್ .ತಳವಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ರೂಪಾ ಮಾನೆ ನಿರೂಪಿಸಿ, ವಂದಿಸಿದರು.
- 29ಸಿಕೆಡಿ03
ಅಂಕಲಿ ಗ್ರಾಮದ ಕೆಎಲ್ ಇ ಸಂಸ್ಥೆಯ ಶಾರದಾದೇವಿ ಕೋರೆ ಪದವಿ ಪೂರ್ವ ಕಾಲೇಜಿನಲ್ಲಿಹಮ್ಮಿಕೊಳ್ಳಲಾದ ಪೋಕ್ಸೋ ಜಾಗೃತಿ ಕಾರ್ಯಕ್ರಮದಲ್ಲಿಸಿಪಿಐ ವಿಶ್ವನಾಥ ಚೌಗಲಾ ಮಾತನಾಡಿದರು.