Miracle Cave Open Camp Scheduled For February In Harihara For Scientific Purpose
ಪವಾಡ ಗುಟ್ಟು ಬಯಲು ಶಿಬಿರ 3ರಿಂದ
Contributed by: Vinayaka Naik P|Vijaya Karnataka•
ಪವಾಡ ಗುಟ್ಟು ಬಯಲು ಶಿಬಿರ 3ರಿಂದ
ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮತ್ತು ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿರಾಜ್ಯದ ನಾಲ್ಕು ವಿಭಾಗೀಯ ಮಟ್ಟದಲ್ಲಿಪವಾಡ ಗುಟ್ಟು ಬಯಲು ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅ.3 ಮತ್ತು 4 ರಂದು ಹರಿಹರದ ಮೈತ್ರಿವನದಲ್ಲಿ, ಅ.10 ಮತ್ತು 11ರಂದು ಘಟಪ್ರಭದಲ್ಲಿ, ಅ.17 ಮತ್ತು 18ರಂದು ತಾವರಗೆರೆಯಲ್ಲಿಹಾಗೂ ಅ.23 ಮತ್ತು 24ರಂದು ಮೈಸೂರಿನಲ್ಲಿ ಪಾವಡ ಗುಟ್ಟು ಬಯಲು ಶಿಬಿರ ಆಯೋಜಿಸಲಾಗಿದೆ. ಈ ಎಲ್ಲಾಶಿಬಿರಗಳಲ್ಲಿಹುಲಿಕಲ್ ನಟರಾಜ್ ಅವರು ತರಬೇತಿ ನೀಡಲಿದ್ದಾರೆ. ಪ್ರತಿ ಶಿಬಿರದಲ್ಲೂ100ರಿಂದ 120 ಜನರು ಭಾಗವಹಿಸಲಿದ್ದಾರೆ. ಉಚಿತ ಊಟ ಮತ್ತು ವ್ಯವಸ್ಥೆ ಮಾಡಲಾಗಿದೆ ಹಾಗೂ ಎಲ್ಲಾಶಿಬಿರಾರ್ಥಿಗಳಿಗೂ ಪವಾಡ ಗುಟ್ಟು ಬಯಲು ಕಿಟ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಮೌಢ್ಯ, ಕಂದಾಚಾರ ಮತ್ತು ಪ್ರಾಚೀನತೆಯ ವ್ಯಸನದಲ್ಲಿವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ ಹಾಗೂ ವೈಚಾರಿಕ ಚಿಂತನೆಗಳನ್ನು ಅವಜ್ಞೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಹರಿಹರೆಯದ ಮನಸ್ಸುಗಳಲ್ಲಿವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಸುವ ಉದ್ದೇಶದಿಂದ ಈ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಲೋಲಾಕ್ಷಮ್ಮ ಮಾತನಾಡಿ, 20ರಿಂದ 40 ವರ್ಷ ವಯೋಮಾನ ಹೊಂದಿರುವ ಎಲ್ಲಾವ್ಯಕ್ತಿಗಳು ಈ ಶಿಬಿರದಲ್ಲಿಪಾಲ್ಗೊಳ್ಳಬಹುದಾಗಿದೆ. ಆಸಕ್ತರು ಹೆಸರು ನೋಂದಾಯಿಸಲು ಮೊ:9481867847, 9448441841ಗೆ ಸಂಪರ್ಕಿಸಬೇಕು ಎಂದು ಕೋರಿದರು. ಗೋಷ್ಠಿಯಲ್ಲಿಎಸ್ .ಹನುಮಂತಪ್ಪ ಕರೂರು, ಚಂದ್ರಕಲಾ, ಡಾ.ನಾಗರಾಜ್ ಇದ್ದರು.