ಸಂಪಾಜೆ ಗ್ರಾಪಂನಿಂದ ಪೀಠೋಪಕರಣ ಹಸ್ತಾಂತರ

Contributed by: mpadmanabha51@gmail.com|Vijaya Karnataka•
transfer of new furniture to special needs individuals by sampaje gram panchayat
ವಿಕ ಸುದ್ದಿಲೋಕ ಸುಳ್ಯ

ಸಂಪಾಜೆ ಗ್ರಾಮ ಪಂಚಾಯಿತಿ ಸ್ವಂತ ನಿಧಿ ಕ್ರಿಯಾ ಯೋಜನೆಯಲ್ಲಿಕಾಯ್ದಿರಿಸಿದ ಶೇ.25 ಮತ್ತು ಶೇ.5ರ ಪ.ಜಾತಿ ಮತ್ತು ಪ.ಪಂಗಡ ಹಾಗೂ ವಿಶೇಷಚೇತನರಿಗೆ ಮೀಸಲಿಸಿದ ಅನುದಾನದಲ್ಲಿಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.
ಫಲಾನುವಿಗಳಾದ ಹರ್ಷ ಕಡೆಪಾಲ, ವಿಶೇಷಚೇತನರಾದ ಶರತ್ ಕೆ. ಎಂ., ರೀನ ಮರಿಟ ಕುಟ್ಟಿನ್ಹ, ಬಾಳಪ್ಪ ರಾಜರಾಂಪುರ, ರಂಜನ್ ಆರ್ . ಪಿ., ಮೂಸಾನ್ ಸಿ. ಎಂ. ದರ್ಖಾಸ್ತು ಮನೆ, ದೊಡ್ಡಡ್ಕ, ಸೀತಾಲಕ್ಷ್ಮಿ ಅವರಿಗೆ ಗೋಡ್ರೇಜ್ ಹಾಗೂ ರಂಜಿನ್ ಕೆ. ಜೆ. ಮತ್ತು ನಿಜಾಮುದ್ದೀನ್ ದರ್ಖಾಸ್ತು ಅವರಿಗೆ ಮಂಚವನ್ನು ಆಡಳಿತಾಧಿಕಾರಿ ಪ್ರಮೋದ್ ಸಮ್ಮುಖದಲ್ಲಿವಿತರಿಸಲಾಯಿತು .

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿಸೋಜ, ಪಂಚಾಯಿತಿ ಕಾರ್ಯದರ್ಶಿ ಮೋಹನ್ ಡಿ., ಪಂಚಾಯಿತಿ ಸಿಬ್ಬಂದಿಗಳಾದ ಗೋಪಮ್ಮ ಹಾಗೂ ಹರ್ಷಿತ್ , ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಎಸ್ .ಕೆ. ಹನೀಫ್ ಹಾಗೂ ಫಲಾನುಭವಿಗಳು ಉಪಸ್ಥತರಿದ್ದರು.

ಫೋಟೋ

1ಎಸ್ ಯುಎಲ್ -ಸಂಪಾಜೆ ಗ್ರಾ.ಪಂ ವತಿಯಿಂದ ಫಲಾನುಭವಿಗಳಿಗೆ ಪೀಠೋಪಕರಣ ಹಸ್ತಾಂತರ ಮಾಡಲಾಯಿತು.