ಶರನ್ನವರಾತ್ರಿ ಮಹೋತ್ಸವ

Contributed by: mambadynews@gmail.com|Vijaya Karnataka•
2026 sharannavaratri festival at the chandikaparameshwari temple in bc road
ಬಿ.ಸಿ.ರೋಡ್ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ

ಬಂಟ್ವಾಳ: ಬಿ.ಸಿ.ರೋಡ್ ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂಡಿಕಾನಗರದ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ2026ನೇ ಸಾಲಿನ ಶರನ್ನವರಾತ್ರಿ ಮಹೋತ್ಸವ ಅ.11ರಿಂದ ಅ.21ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಪ್ರತಿದಿನ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಚಂಡಿಕಾಯಾಗ: ಅ.11ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಚಂಡಿಕಾಯಾಗ ಆರಂಭ, ಮಧ್ಯಾಹ್ನ 12ಗಂಟೆಗೆ ಪೂರ್ಣಾಹುತಿ, 12.30ಕ್ಕೆ ದೇವಿಗೆ ವಿಶೇಷ ಮಹಾಪೂಜೆ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6 ರಿಂದ 8ರ ವರೆಗೆ ನಾನಾ ಸಂಘಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು ವಿಜಯದಶಮಿಯಂದು ಬೆಳಗ್ಗೆ 9 ಗಂಟೆಗೆ ಮಂಗಳವಾದ್ಯ ಘೋಷದೊಂದಿಗೆ ತೆನೆಗೆ ಪೂಜೆ, ವಿತರಣೆ, ಬೆಳಗ್ಗೆ 10 ಗಂಟೆಗೆ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಲ.ಪಿ.ಲೋಕನಾಥ ಶೆಟ್ಟಿ ತಿಳಿಸಿದ್ದಾರೆ.

ಚಿತ್ರ: 2ಬಿಎಚ್ ಚಂಡಿಕಾಪರಮೇಶ್ವರಿ