(ಬೆಂ. ಮಾತ್ರ) ದೇವನಗರಿಯಲ್ಲಿಹಿಂದೂ ಗಣಪನ ವೈಭವ

Contributed by: vishnukumar.gener@timesgroup.com|Vijaya Karnataka•
ganesha shobhayatra in the city incidents of youth dancing
ಶೋಭಾಯಾತ್ರೆಗೆ ಚಾಲನೆ ನೀಡಿದ ಶಾಸಕ ಸಮಥ್ ರ್ ಶಾಮನೂರು | ಹೆಜ್ಜೆ ಹಾಕಿ ಗಮನಸೆಳೆದ ಯುವಕ, ಯುವತಿಯರು(ಕಿಕ್ಕರ್ )

ದೇವನಗರಿಯಲ್ಲಿಹಿಂದೂ ಗಣಪನ ವೈಭವ
=======

ವಿಕ ಸುದ್ದಿಲೋಕ ದಾವಣಗೆರೆ

ಕಿವಿ ಗಡಚಿಕ್ಕುವ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕ-ಯುವತಿಯರು, ಜಾನಪದ ಸಂಸ್ಕೃತಿ ಪ್ರದರ್ಶನ, ಕೇಸರಿ ಶ್ಯಾಲು ತಿರುಗಿಸುತ್ತಾ ಗಮನ ಸೆಳೆದ ಕೇಸರಿ ಕಲಿಗಳು... ಇವು ಮಧ್ಯ ಕರ್ನಾಟಕದ ದೇವನಗರಿಯ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯ ಝಲಕ್ .

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿಹಿಂದೂ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, 19 ದಿನವಾದ ಶುಕ್ರವಾರ ಗಣಪತಿ ಮೂರ್ತಿಗೆ ಶನಿವಾರ ಬೆಳಗ್ಗೆ 11.15ಕ್ಕೆ ಶಾಸಕ ಸಮಥ್ ರ್ ಶಾಮನೂರು, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ , ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ಸಂಸ್ಥಾಪಕ ಜೊಳ್ಳಿ ಗುರು, ದಿನೇಶ್ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿ, ವಿಘ್ನ ನಿವಾರಕನ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಅಬ್ಬರಿಸಿದ ಡಿಜೆ:

ಯಾತ್ರೆಯ ಆರಂಭದಲ್ಲಿಅಷ್ಟಾಗಿ ಜನ ಜಂಗುಳಿ ಕಾಣ ಬರದಿದ್ದರೂ, ಬಿಸಿಲು ಏರುತ್ತಿದ್ದಂತೆ ಯಾತ್ರೆಗೆ ಸೇರುವ ಯುವಕ-ಯುವತಿಯರ ಸಂಖ್ಯೆ ಹೆಚ್ಚಾಗ ತೊಡಗಿತು. ಹಾಗಾಗಿ ಮೆರವಣಿಗೆ ಸಾಗಿದ ಮಾರ್ಗದಲ್ಲಿಕಾಲಿಡಲಾಗದಷ್ಟು ಜನ ಜಂಗುಳಿ ತುಂಬಿ ತುಳುಕುತ್ತಿತ್ತು. ಇನ್ನು ಶೋಭಾಯಾತ್ರೆಗೆ ಚಾಲನೆ ದೊರೆಯುತ್ತಿದ್ದಂತೆ ಹೈಸ್ಕೂಲ್ ಮೈದಾನ, ಎವಿಕೆ ರಸ್ತೆಯಲ್ಲಿನಿಂತಿದ್ದ ಆರು ಡಿಜೆಗಳು ಅಬ್ಬರಿಸ ತೊಡಗಿದವು. ಡಿಜೆಯಿಂದ ಹೊರಡುತ್ತಿದ್ದ ನಾನಾ ಸಿನಿಮಾ ಗೀತೆ, ಜಾನಪದ ಗೀತೆಗಳ ಸದ್ದಿಗೆ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು. ಯುವತಿಯರಿಗಾಗಿಯೇ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ತಾವೇ ಪ್ರಾಯೋಜಿಸಿದ್ದ ಡಿಜೆ ಮುಂದೆ ನಿಂತು ಬಿಜೆಪಿ ಮುಖಂಡ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸೇರಿ ನಾನಾ ಯುವ ರಾಜಕಾರಣಿಗಳು, ಜರಿಕಟ್ಟೆ ಗೆಳೆಯರ ಬಳಗದ ಪದಾಧಿಕಾರಿಗಳು ಸಾರ್ವಜನಿಕರತ್ತ ಕೈ ಬಿಸಿ ಗಮನ ಸೆಳೆದರು.

ಗಾರುಡಿ ಗೊಂಬೆ ಕುಣಿತ, ಚಂಡೆ, ನಾಸಿಕ್ ಡೋಲ್ ಸೇರಿ ನಾನಾ ಜಾನಪದ ಕಲಾತಂಡಗಳು ಸಾಂಸ್ಕೃತಿಕ ಸ್ಪರ್ಶ ನೀಡಿದವು. ಆದರೆ, ಯುವಕ-ಯುವತಿಯರು ಮಾತ್ರ ಜಾನಪದ ಕಲಾತಂಡಗಳಿಂದ ದೂರು ಉಳಿದು ಡಿಜೆ ಇರುವ ಕಡೆಯೇ ಹೆಚ್ಚಾಗಿ ಮುತ್ತಿಕೊಂಡಿದ್ದರು. ಶೋಭಾಯಾತ್ರೆಯು ಎವಿಕೆ ರಸ್ತೆಯಿಂದ ಅಂಬೇಡ್ಕರ್ ವೃತ್ತದ ಮುಖಾಂತರ ಜಯದೇವ ವೃತ್ತಕ್ಕೆ ತಲುಪುತ್ತಿದ್ದಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಗಣಪತಿ ಮೂರ್ತಿಗೆ ಕ್ರೇನ್ ಮೇಲೆ ನಿಂತು ಪುಷ್ಪಾರ್ಚನೆ ಮಾಡಿದರು. ಅಲ್ಲದೇ, ರೇಣುಕಾಚಾರ್ಯ ಸಹ ಹೆಜ್ಜೆ ಹಾಕಿ ಯುವಕರಿಗೆ ಸಾಥ್ ನೀಡಿದರು. ಇನ್ನು ಬಿಜೆಪಿ ಯುವ ಮುಖಂಡ ಜಿ.ಎಸ್ . ಅನೀತ್ ಸೇರಿ ಇತರೆ ರಾಜಕಾರಣಿಗಳು ಗಣಪತಿ ದರ್ಶನ ಪಡೆದು ಕೆಲಕಾಲ ಯಾತ್ರೆಯೊಂದಿಗೆ ಸಾಗಿದರು.

-----

ನೆಗಿಲಯೋಗಿ ಬಾವುಟ

ಶೋಭಾಯಾತ್ರೆಯಲ್ಲಿನೆಗಿಲಯೋಗಿ ಉಳುಮೆ ಮಾಡುತ್ತಿರುವ ಭಾವಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ಈ ಬಾವುಟದಲ್ಲಿಬರೆದಿದ್ದ ‘ರೈತನ ಬೆಳೆಗೆ ಬೆಲೆ ಇಲ್ಲ, ಸೈನಿಕರ ಸಾವಿಗೆ ಕೊನೆ ಇಲ್ಲ’ ಎಂಬ ಸಾಲು ಓದುಗರಲ್ಲಿಅನ್ನದಾತ ಮತ್ತು ಯೋಧರ ಸ್ಥಿತಿಯ ಬಗ್ಗೆ ಮರುಕ ಹುಟ್ಟಿಸಿತು.

------

ಫೋಟೋ: 3ಡಿವಿಜಿ06

ದಾವಣಗೆರೆಯಲ್ಲಿಶನಿವಾರ ನಡೆದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿಶಾಸಕ ಸಮಥ್ ರ್ ಶಾಮನೂರು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಗಮನ ಸೆಳೆದರು.

-----

ಫೋಟೋ: 3ಡಿವಿಜಿ05 ಮತ್ತು 06

ದಾವಣಗೆರೆಯ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಅಂಗವಾಗಿ ಶನಿವಾರ ಬೃಹತ್ ಶೋಭಾಯಾತ್ರೆ ನಡೆಯಿತು.

----

ಫೋಟೋ: 3ಡಿವಿಜಿ04

ಶೋಭಾಯಾತ್ರೆಯಲ್ಲಿಜಮಾಯಿಸಿರುವ ಜನಸ್ತೋಮ.