ಸಿಲಿಂಡರ್ ಸೋರಿಕೆ,ಮನೆಗೆ ಬೆಂಕಿ

Contributed by: vkhdlreporter@gmail.com|Vijaya Karnataka•
gas cylinder leak causes fire in house millions in damage
ಸಿಲಿಂಡರ್ ಸೋರಿಕೆ,ಮನೆಗೆ ಬೆಂಕಿ

ವಿಕ ಸುದ್ದಿಲೋಕ ಹೂವಿನಹಡಗಲಿ
ಇಲ್ಲಿನ ಕುಡುವ ವಕ್ಕಲಿಗರ ಶಾಲೆ ಬಳಿ ಶನಿವಾರ ಮನೆಯೊಂದರಲ್ಲಿಸಿಲಿಂಡರ್ ನಿಂದ ಅನಿಲ್ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಈಟಿ ಹನುಮಂತಪ್ಪ ಎಂಬುವರು ಮನೆಗೆ ಹೊಸ ಸಿಲಿಂಡರ್ ತಂದಿದ್ದಾರೆ. ಒಲೆ ಮತ್ತು ಸಿಲಿಂಡರ್ ಪೈಪ್ ಜೋಡಣೆಯಲ್ಲಿಲೋಪವಾಗಿದ್ದರಿಂದ ಗ್ಯಾಸ್ ಸೋರಿ ಬೆಂಕಿ ಹೊತ್ತಿದೆ.

ಈ ವೇಳೆ ಗಾಬರಿಗೊಂಡ ಮನೆಯಲ್ಲಿದ್ದ ಜನ ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆಯಲ್ಲಿದ್ದ ಗೃಹ ಬಳಕೆ ಸಾಮಗ್ರಿ, ರೆಫ್ರಿಜಿರೇಟರ್ , ದಾಳಿಂಬೆ ಬೆಳೆಗೆ ಸಿಂಪಡಿಸುವ ಔಷಧ, ಗೊಬ್ಬರದ ಬಾಟಲಿಗಳು ಇತರ ವಸ್ತುಗಳು ಸುಟ್ಟಿವೆ. ಅಂದಾಜು 3ಲಕ್ಷ ರೂ.ಗಳಿಗೂ ಹೆಚ್ಚು ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿ, ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಚಿತ್ರ:ವಿಎನ್ ಆರ್ 3ಎಚ್ ಡಿಎಲ್ ಪಿ1-ಹೂವಿನಹಡಗಲಿಯ ಕುಡುವ ವಕ್ಕಲಿಗರ ಶಾಲೆ ಬಳಿ ಮನೆಯೊಂದರಲ್ಲಿಸಿಲಿಂಡರ್ ಸೋರಿ ಮನೆಗೆ ಬೆಂಕಿ ಹೊತ್ತಿ, ಗೃಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿರುವುದು.