ಚರಿತ್ರೆ ಸೃಷ್ಟಿಸಿದ ಗಾಲ್ಫರ್ ಕನ್ನಡತಿ

Contributed by: manjunath.gowda@timesgroup.com|Vijaya Karnataka•
pranavi aras historic achievement of a golfer from karnataka winning gold at asian games
ವೈಯಕ್ತಿಕ ವಿಭಾಗದಲ್ಲಿಬಂಗಾರ ಗೆದ್ದ ದೇಶದ ಮೊದಲ ಮಹಿಳಾ ಗಾಲ್ಫರ್

ನಗೋಯಾ: ಮೈಸೂರಿನ 23 ವರ್ಷದ ಪ್ರಣವಿ ಅರಸ್ ಶನಿವಾರ ಏಷ್ಯನ್ ಗೇಮ್ಸ್ ನ ಗಾಲ್ ್ಫ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿಚಿನ್ನದ ಪದಕ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನಿದ್ರೆಯಿಲ್ಲದ ರಾತ್ರಿಯ ಆಯಾಸದ ನಡುವೆಯೂ ಒಂದು ಸ್ಟೊ್ರೕಕ್ ಮುನ್ನಡೆಯನ್ನು ಕಾಪಾಡಿಕೊಂಡ ಪ್ರಣವಿ, ಭಾರತಕ್ಕೆ ತಂಡ ವಿಭಾಗದಲ್ಲಿಬೆಳ್ಳಿ ಪದಕ ತಂದುಕೊಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ44 ವರ್ಷಗಳ ಬಳಿಕ ಭಾರತ ತನ್ನ ಅತ್ಯುತ್ತಮ ಪ್ರದರ್ಶನ ದಾಖಲಿಸಿತು.
ಮೂರನೇ ಹೋಲ್ ನಲ್ಲಿಟ್ರಿಪಲ್ ಬೋಗಿ ಹೊಡೆದು, ರಾತ್ರಿಯ ಮೂರು ಸ್ಟೊ್ರೕಕ್ ಗಳ ಮುನ್ನಡೆಯನ್ನು ಕಳೆದುಕೊಂಡಿದ್ದ ಪ್ರಣವಿ, ಬಳಿಕ ಅದ್ಭುತವಾಗಿ ತಿರುಗೇಟು ನೀಡಿದರು. ಅಂತಿಮ ಸುತ್ತಿನಲ್ಲಿಆರನೇ, 10ನೇ ಹಾಗೂ 13ನೇ ಹೋಲ್ ಗಳಲ್ಲಿಬರ್ಡಿ ದಾಖಲಿಸಿದ ಅವರು, 70ರ ಸಮ-ಪಾರ್ ಸ್ಕೋರ್ ನೊಂದಿಗೆ ನಾಲ್ಕು ದಿನಗಳ ಒಟ್ಟು ಅಂಕಗಳನ್ನು 15-ಅಂಡರ್ 265ಕ್ಕೆ ಕೊಂಡೊಯ್ದರು.ನಂತರ ಪ್ರಣವಿ ಒಂದು ಸ್ಟೊ್ರೕಕ್ ಮುನ್ನಡೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು.

ಸ್ಪರ್ಧೆ ಬಳಿಕ ಸಂತಸ ಹಂಚಿಕೊಂಡ ಪ್ರಣವಿ, ‘‘ನಾನು ಮೊದಲು ಸಾಧನೆ ಮಾಡುವುದನ್ನು ಇಷ್ಟಪಡುತ್ತೇನೆ. ಮುಂದೆ ಇನ್ನೂ ಹಲವರು ಹೆಚ್ಚಿನ ಸಾಧನೆ ಮಾಡಬಹುದು. ಆದರೆ ಮೊದಲಿಗರು ಎಂದಿಗೂ ಮೊದಲಿಗರೇ,’’ ಎಂದು ಐತಿಹಾಸಿಕ ಗೆಲುವಿನ ಬಳಿಕ ಸಂತಸ ವ್ಯಕ್ತಪಡಿಸಿದರು. ಪ್ರಣವಿ ಅವರ ಪ್ರದರ್ಶನವು ಭಾರತ ತಂಡದ ಬೆಳ್ಳಿ ಪದಕ ಗೆಲುವಿಗೂ ನಿರ್ಣಾಯಕವಾಯಿತು. ತಂಡದ ಇತರ ಸದಸ್ಯರಾದ ಅದಿತಿ ಅಶೋಕ್ ಅಂತಿಮ ಸುತ್ತಿನಲ್ಲಿ67 ಹಾಗೂ ದೀಕ್ಷಾ ದಾಗರ್ 77 ಸ್ಕೋರ್ ದಾಖಲಿಸಿದರು. ‘‘ಅಂತಿಮ ದಿನದ ಸ್ಪರ್ಧೆಗೆ ಮುನ್ನ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ನನ್ನ ಕುಟುಂಬಸ್ಥರು ಸಹ ನಿದ್ರೆ ಮಾಡದೆ ಅಂತಿಮ ಸುತ್ತಿನ ಬಗ್ಗೆ ತೀವ್ರ ಕುತೂಹಲದಿದ್ದರು,’’ ಎಂದು ಪ್ರಣವಿ ತಿಳಿಸಿದರು. ಪ್ರಣವಿ ಅವರ ಚಿನ್ನದ ಪದಕವು 2002ರಲ್ಲಿಶಿವ್ ಕಪೂರ್ ಪುರುಷರ ವೈಯಕ್ತಿಕ ವಿಭಾಗದಲ್ಲಿಚಿನ್ನ ಗೆದ್ದ ಬಳಿಕ ಏಷ್ಯಾಡ್ ನಲ್ಲಿಭಾರತಕ್ಕೆ ದೊರೆತ ಮೊದಲ ಗಾಲ್ ್ಫ ಚಿನ್ನವಾಗಿದೆ.