ರಾವಂದೂರು ಕೆಪಿಎಸ್ ಶಾಲೆಗೆ ಡೆಸ್ಕ್ ಕೊಡುಗೆ

Contributed by: ravandoormallesh@gmail.com|Vijaya Karnataka•
ravanduru kps school receives 25 desks a new addition to education
ರಾವಂದೂರು ಕೆಪಿಎಸ್ ಶಾಲೆಗೆ ಡೆಸ್ಕ್ ಕೊಡುಗೆ

ವಿಕ ಸುದ್ದಿಲೋಕ ರಾವಂದೂರು
ಸರಕಾರಿ ಶಾಲೆಗಳ ಅಭಿವೃದ್ಧಿಯ ಉದ್ದೇಶದಿಂದ ಮೂಲಸೌಕರ್ಯಗಳನ್ನು ಒದಗಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಂಸದ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹೇಳಿದರು.

ಇಲ್ಲಿನ ಸರಕಾರಿ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಭೇಟಿ ನೀಡಿದ ಅವರು, ಸೆಮಿನಾರ್ ಹಾಲ್ ಉದ್ಘಾಟನೆ ಹಾಗೂ ಐಟಿಸಿ ಕಂಪನಿ ವತಿಯಿಂದ ನೀಡಲಾದ ಡೆಸ್ಕ್ ಗಳ ವಿತರಣಾ ಕಾರ್ಯಕ್ರಮದಲ್ಲಿಮಾತನಾಡಿದರು.

‘‘25 ಡೆಸ್ಕ್ ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಆಸನ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ, ಪ್ರತಿ ವರ್ಷ ತನ್ನ ಸಿಎಸ್ ಆರ್ ಅನುದಾನದ ಮೂಲಕ ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಕುಡಿಯುವ ನೀರು, ಕೊಠಡಿಗಳ ನಿರ್ಮಾಣ, ಪೀಠೋಪಕರಣಗಳು, ಶೌಚಾಲಯ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಸರಕಾರದ ಸಹಯೋಗದೊಂದಿಗೆ ಒದಗಿಸುತ್ತಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕಂಪನಿಯೂ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಚಾರ,’’ ಎಂದರು.

ತಂಬಾಕಿಗೆ ಉತ್ತಮ ಬೆಲೆ: ‘‘ಪ್ರತಿ ವರ್ಷದಂತೆ ಈ ವರ್ಷವೂ ತಂಬಾಕು ಖರೀದಿ ಮಾರುಕಟ್ಟೆ ಅಕ್ಟೋಬರ್ ನಲ್ಲಿಆರಂಭವಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ,’’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಕರ್ನಾಟಕದಲ್ಲಿಪಿರಿಯಾಪಟ್ಟಣ ಅತಿ ಹೆಚ್ಚು ತಂಬಾಕು ಬೆಳೆಯುವ ಕೇಂದ್ರವಾಗಿದ್ದು, ರೈತರಿಗೆ ಉತ್ತಮ ಬೆಲೆ ದೊರೆಯುವ ನಿಟ್ಟಿನಲ್ಲಿಒತ್ತಡ ಹೇರಲಾಗುವುದು,’’ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ.ವಿ., ಮಾಜಿ ಅಧ್ಯಕ್ಷ ರಾಜೇಗೌಡ, ಮುಖಂಡರಾದ ಆರ್ .ಟಿ.ಸತೀಶ್ , ಆರ್ .ವಿ.ವಿಶ್ವನಾಥ್ , ರಮೇಶ್ ಮೂರ್ತಿ, ಐಟಿಸಿ ಕಂಪನಿ ಮುಖ್ಯಸ್ಥ ಪ್ರವೀಣ್ , ಪರೀಕ್ಷಿತ್ ರಾಜೆ ಅರಸ್ , ಉಪಪ್ರಾಂಶುಪಾಲ ಸುರೇಶ್ , ಮುಖ್ಯ ಶಿಕ್ಷಕಿ ಲಿಲ್ಲಿಮೇರಿ, ಉಪನ್ಯಾಸಕ ಲಕ್ಷ್ಮಿಕಾಂತ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ .ಎಸ್ .ದೊಡ್ಡಣ್ಣ, ಎಸ್ ಡಿಎಂಸಿ ಸದಸ್ಯರಾದ ರಾಜೇಂದ್ರ, ಜಲೇಂದ್ರ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

*ಫೋಟೊ ಇದೆ

ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಕರ್ನಾಟಕ ಕೆಪಿಎಸ್ ಪ್ರಾಥಮಿಕ ವಿಭಾಗದ ಶಾಲೆಗೆ ಐಟಿಸಿ ಕಂಪನಿ ವತಿಯಿಂದ ನೀಡಲಾದ 25 ಡೆಸ್ಕ್ ಗಳನ್ನು ಸಂಸದ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಶಾಲೆಗೆ ಹಸ್ತಾಂತರಿಸಿದರು.