ಶರನ್ನವರಾತ್ರಿ ಮಹೋತ್ಸವ

Contributed by: mambadynews@gmail.com|Vijaya Karnataka•
sharannavaratri mahotsav 2023 grand ceremony of devi worship on bc road
ಬಿ.ಸಿ.ರೋಡ್ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿ

ಬಂಟ್ವಾಳ: ಬಿ.ಸಿ.ರೋಡ್ ನ ಶ್ರೀರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿಶರನ್ನವರಾತ್ರಿ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಸಂಜೆ 6ರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು , ರಾತ್ರಿ 8 ಗಂಟೆಗೆ ಮಹಾಪೂಜೆ , ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ವಿಶೇಷ ಆರಾಧನೆಗಳು: ಅ.15 ಮತ್ತು 16ರಂದು ಬೆಳಗ್ಗೆ 11.30ಕ್ಕೆ ಹಗಲು ನಾಗಾರಾಧನೆ , ಅ.19ರಂದು ದುರ್ಗಾಷ್ಟಮಿ ಪ್ರಯುಕ್ತ ವಿಶೇಷ ದುರ್ಗಾನಮಸ್ಕಾರ ಪೂಜೆ, ಅ.20ರಂದು ಬೆಳಗ್ಗೆಯಿಂದ ದೇವಿಯ ಸನ್ನಿಧಿಯಲ್ಲಿಆಯುಧ ಪೂಜೆ ಮಾಡಿಸುವ ಭಕ್ತರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಅ.21ರಂದು ವಿಜಯದಶಮಿಯಂದು ಬೆಳಗ್ಗೆ 8ರಿಂದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿಮಹಾ ಚಂಡಿಕಾ ಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಪ್ರತಿದಿನ ಭಜನೆ, ನಾಟ್ಯ, ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿದ್ದು, 21ರಂದು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದಿಂದ ರೋಹಿಣಿ ಉದಯ್ ಶಿಷ್ಯೆಯರ ನೃತ್ಯರಂಜನಿ ಇರಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್ ತಿಳಿಸಿದ್ದಾರೆ.

ಚಿತ್ರ: 2ಬಿಎಚ್ ರಕ್ತೇಶ್ವರಿ