ಹಿಂದೂ ಮಹಾ ಗಣಪತಿ ಶೋಭಾಯಾತ್ರೆ

Contributed by: mahesh.adali@gmail.com|Vijaya Karnataka•
grand ganapati procession magnificent celebration in vijayapura
ಹಿಂದೂ ಮಹಾ ಗಣಪತಿ ಶೋಭಾಯಾತ್ರೆ

ವಿಕ ಸುದ್ದಿಲೋಕ ವಿಜಯಪುರ
ನಗರದ ಸಿದ್ದೇಶ್ವರ ದೇವಾಲಯ ಸಮೀಪ ಪ್ರತಿಷ್ಠಾಪಿಸಿದ್ದ ಸನಾತನ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಮೆರವಣಿಗೆ ವೇಳೆ ಸಾವಿರಾರು ಯುವಕರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಡಿಜೆಗಳಲ್ಲಿಗಣಪತಿಯ ಭಕ್ತಿ ಭಾವದ ಗೀತೆಗಳು ಮೊಳಗಿದವು. ಯುವಕರು ಕೈಯಲ್ಲಿಶ್ರೀರಾಮ - ಅಯೋಧ್ಯೆ, ಹನುಮಂತನ ಚಿತ್ರವುಳ್ಳ ಕೇಸರಿ ಧ್ವಜವನ್ನು ಹಿಡಿದುಕೊಂಡಿದ್ದರು. ಜತೆಗೆ ಕೇಸರಿ ಶಲ್ಯ ಧರಿಸಿ ಮೆರವಣಿಗೆಯಲ್ಲಿಕುಣಿದರು.

ಮೆರವಣಿಗೆ ಸಾಗುವ ಮಾರ್ಗ ಕೇಸರಿಮಯವಾಗಿತ್ತು. ಕೆಲ ಯುವಕರು ಹಿಂದುತ್ವ ರಕ್ಷಣೆ ಸಾರುವ ಫಲಕಗಳನ್ನು ಪ್ರದರ್ಶಿಸಿದರು. ಜತೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪುನೀತ್ ಕೆರೆಹಳ್ಳಿ ಅವರ ಭಾವಚಿತ್ರಗಳೂ ರಾರಾಜಿಸಿದವು. ಬಾಲಕರು, ಯುವಕರು ಮತ್ತು ಯುವತಿಯರು ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿಪಾಲ್ಗೊಂಡಿದ್ದರು. ಸಿದ್ಧೇಶ್ವರ ದೇವಾಲಯದಿಂದ ಆರಂಭಗೊಂಡ ಶೋಭಾಯಾತ್ರೆ ಆಜಾದ್ ರಸ್ತೆ, ಗಾಂಧಿವೃತ್ತ ಸೇರಿದಂತೆ ನಾನಾ ಪ್ರಮುಖ ಮಾರ್ಗಗಳಲ್ಲಿಸಂಚರಿಸಿ ಶಿವಾಜಿ ವೃತ್ತದಲ್ಲಿಸಂಪನ್ನಗೊಂಡಿತು.

ಗಣೇಶ-ಬಿಜೆಪಿ4(1ರಿಂದ6)

ವಿಜಯಪುರದಲ್ಲಿಸನಾತನ ಹಿಂದೂ ಮಹಾ ಗಣಪತಿ ಭವ್ಯ ಶೋಭಾಯಾತ್ರೆ ನಡೆಯಿತು.