Modi And Shah Should Apologize For The Misuse Of Sir
ಎಸ್ ಐಆರ್ ದುರ್ಬಳಕೆ: ಮೋದಿ, ಶಾ ಕ್ಷಮೆ ಕೇಳಲಿ
Contributed by: Vinayaka Naik P|Vijaya Karnataka•
ಕಿಕ್ಕರ್ : ಮಾಜಿ ಸಂಸದ ವಿ.ಎಸ್ . ಉಗ್ರಪ್ಪ ಒತ್ತಾಯ
---ಎಸ್ ಐಆರ್ ದುರ್ಬಳಕೆ: ಮೋದಿ, ಶಾ ಕ್ಷಮೆ ಕೇಳಲಿ
ವಿಕ ಸುದ್ದಿಲೋಕ ದಾವಣಗೆರೆ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್ ) ಹೆಸರಿನಲ್ಲಿಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಂಸದ ವಿ.ಎಸ್ . ಉಗ್ರಪ್ಪ ಒತ್ತಾಯಿಸಿದರು.
ನಗರದಲ್ಲಿಭಾನುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಕೇಂದ್ರ ಚುನಾವಣಾ ಆಯೋಗ ಪಕ್ಷಪಾತ ಮಾಡುತ್ತಿದೆ. ಇದರ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು’’ ಎಂದು ಆಗ್ರಹಿಸಿದರು.
‘‘ಅರ್ಜಿ ನಮೂನೆ-7ನ್ನು ದುರ್ಬಳಕೆ ಮಾಡಿಕೊಂಡು ಬಡವರು, ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾರರ ಹಕ್ಕು ಕಸಿಯುವ ಷಡ್ಯಂತ್ರವನ್ನು ಕಾಂಗ್ರೆಸ್ ಬಯಲು ಮಾಡಿದೆ. ರಾಜ್ಯವನ್ನು ಭೀಕರ ಬರ ಆವರಿಸಿದೆ. 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. ಕೇಂದ್ರ ಸರಕಾರ ಕೂಡಲೇ ರಾಜ್ಯದ ನೆರವಿಗೆ ಧಾವಿಸಬೇಕು. ಬಿಹಾರ, ಉತ್ತರಪ್ರದೇಶಕ್ಕೆ ನೀಡಿದ ರೀತಿಯಲ್ಲಿಕರ್ನಾಟಕಕ್ಕೂ ಕನಿಷ್ಠ 5 ಸಾವಿರ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ.’’ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ‘‘ಪಕ್ಷದ ಸೂಚನೆಯ ಮೇರೆಗೆ ಕೆಪಿಸಿಸಿ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದಾರೆ. ಪಕ್ಷಕ್ಕೆ ಹೆಚ್ಚು ಸಮಯ ಕೊಡುವವರು, ಸಿದ್ಧಾಂತ ಅರಿತವರು ಹಾಗೂ ಅರ್ಹರನ್ನು ಶಿಫಾರಸು ಮಾಡಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಇದರಿಂದ ಅನುಕೂಲವಾಗಲಿದೆ’’ ಎಂದು ಹೇಳಿದರು.
ಗೋಷ್ಠಿಯಲ್ಲಿಸಂಘಟನ್ ಸೃಜನ್ ವೀಕ್ಷಕರಾಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಪ್ರಸನ್ನಕುಮಾರ್ , ಶಿವಮೊಗ್ಗ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ, ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಅನಂತ ನಾಯ್ಕ, ಕಾಂಗ್ರೆಸ್ ಮುಖಂಡರಾದ ಪಾಲಯ್ಯ, ಎಚ್ .ಬಿ. ಮಂಜಪ್ಪ, ದಿನೇಶ್ ಕೆ.ಶೆಟ್ಟಿ ಹಾಜರಿದ್ದರು.
-----
ಅಧ್ಯಕ್ಷರ ನೇಮಕಕ್ಕೆ ಆಕ್ಷೇಪ
ಇಬ್ರಾಹಿಂ ಖಲೀಲುಲ್ಲಾಅವರನ್ನು ಕಾಂಗ್ರೆಸ್ ಜಿಲ್ಲಾಘಟಕದ ನೂತನ ಅಧ್ಯಕ್ಷರಾಗಿ ನೇಮಕ ಮಾಡಿರುವ ಪಕ್ಷದ ವರಿಷ್ಠರ ತೀರ್ಮಾನದ ವಿರುದ್ಧ ಪಕ್ಷದ ಕೆಲ ಮುಖಂಡರು ವಿ.ಎಸ್ . ಉಗ್ರಪ್ಪ ಅವರನ್ನು ಭೇಟಿ ಆಕ್ಷೇಪ ಸಲ್ಲಿಸಿದೆ. ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಮುಜಾಹಿದ್ ನೇತೃತ್ವದ ತಂಡ ವೀಕ್ಷಕರಿಗೆ ಲಿಖಿತ ದೂರು ಸಲ್ಲಿಸಿತು. ಪಕ್ಷದ ಕಾರ್ಯಕರ್ತರು, ನಾಯಕರ ಅಭಿಪ್ರಾಯವನ್ನು ಕಡೆಗಣಿಸಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಯಿತು.