ಗೋಕರ್ಣ

Contributed by: gajunayakgokarna@gmail.com|Vijaya Karnataka•
protest against electricity supply disruption in gokarna village
ಗ್ರಾಮೀಣ ಭಾಗಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯ

ಹೆಸ್ಕಾಂ ಕಚೇರಿಗೆ ಮುತ್ತಿಗೆ
ಗೋಕರ್ಣ: ತದಡಿ, ಗಂಗಾವಳಿ ಮತ್ತಿತರ ಗ್ರಾಮೀಣ ಭಾಗಕ್ಕೆ ವಿದ್ಯುತ್ ಸರಬರಾಜು ನಿಲ್ಲಿಸಿ, ಗೋಕರ್ಣ ಭಾಗಕ್ಕೆ ಮಾತ್ರ ಪೂರೈಸುತ್ತಿರುವುದನ್ನು ಖಂಡಿಸಿ ಆ ಭಾಗದ ಗ್ರಾಮಸ್ಥರು ಶನಿವಾರ ರಾತ್ರಿ ಹೆಸ್ಕಾಂ ಕಚೇರಿಗೆ ಏಕಾಏಕಿ ಮುತ್ತಿಗೆ ಪ್ರತಿಭಟನೆ ನಡೆಸಿದರು.

ಒಮ್ಮೆಲೆ ಜನರು ಬರುತ್ತಿದ್ದಂತೆ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಕಚೇರಿಗೆ ಬಂದ ಅಧಿಕಾರಿಗಳನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಭಾಗದಲ್ಲಿವಿದ್ಯತ್ ನೀಡಿ ನಮ್ಮಲ್ಲಿಏಕೆ ವಿದ್ಯತ್ ನಿಲುಗಡೆಗೊಳಿಸಿದ್ದೀರಿ? ಎಂದು ಪ್ರಶ್ನಿಸಿದರು. ಮುಖ್ಯ ಮಾರ್ಗದಲ್ಲಿವಿದ್ಯುತ್ ಪೂರೈಕೆಯಲ್ಲಿವ್ಯತ್ಯಯ ಹಾಗೂ ಇಲ್ಲಿನ ಉಪಕೇಂದ್ರದಲ್ಲಿಲೋಡ್ ಹೆಚ್ಚಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರವಾಸಿ ತಾಣದಲ್ಲಿಹೆಚ್ಚಿನ ಸಾಮರ್ಥ್ಯದ ಉಪಕರಣ ಅಳವಡಿಸಿಕೊಳ್ಳಬೇಕು. ಈ ರೀತಿ ಒಂದು ಕಡೆ ಕರೆಂಟ್ ನೀಡುವುದು, ಇನ್ನೊಂದು ಕಡೆ ನಿಲುಗಡೆಗೊಳಿಸುವುದು ಯಾವ ನ್ಯಾಯ? ಎಂದು ಮರು ಪ್ರಶ್ನಿಸಿದರು. ವಾದವಿವಾದ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಪಿಎಸ್ ಐ ಅನಿಲ್ ಹಾಗೂ ಪೊಲೀಸ್ ತುರ್ತು ವಾಹನ 112 ಸಹ ಆಗಮಿಸಿತ್ತು. ನಂತರ ಪೊಲೀಸರು ವಿದ್ಯುತ್ ಪೂರೈಕೆಯ ಭರವಸೆ ನೀಡಿದ ನಂತರ ಗ್ರಾಮಸ್ಥರು ತೆರಳಿದರು.

ಕಳೆದ ಎರಡು ದಿನಗಳಿಂದ ಅತ್ಯಧಿಕ ಸಂಖ್ಯೆಯಲ್ಲಿಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೋಟೆಲ್ ರೆಸಾರ್ಟ್ ಗಳು ಭರ್ತಿಯಾಗಿವೆ. ತಾಪಮಾನವೂ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿಗಾಳಿ, ಮಳೆ ಇಲ್ಲದಿದ್ದರೂ ವಿದ್ಯುತ್ ನಿಲುಗಡೆಗೊಳಿಸಲಾಗುತ್ತಿದೆ. ಉಪಕೇಂದ್ರದಲ್ಲಿಸಾಮರ್ಥ್ಯ ಹೆಚ್ಚಿಸಿ ಎಲ್ಲಡೆ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ ನಾಯಕ ಆಗ್ರಹಿಸಿದರು. ಈ ವೇಳೆ ಶಿವು ಮರಾಠೆ, ಸಿದ್ದಿಕ್ , ಹುಸೇನ್ ಗಂಗಾವಳಿ, ಮತ್ತಿತರ ಭಾಗದ ಗ್ರಾಹಕರು ಇದ್ದರು.