ತಾಲೂಕಿನ ಅಂತರವಳ್ಳಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿತಾಲೂಕು ಪಂಚಾಯಿತಿ ಮಳವಳ್ಳಿ ಮತ್ತು ಯತ್ತಂಬಾಡಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಸೇವಾ ಅಂದೋಲನ ಕಾರ್ಯಕ್ರಮಕ್ಕೆ ತಾ.ಪಂ.ಇಒ ಎಚ್ .ಜಿ. ಶ್ರೀನಿವಾಸ್ ಚಾಲನೆ ನೀಡಿದರು.ಜಿಪಂ ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಚನ್ನೇಗೌಡ ಮಾತನಾಡಿ, ‘‘ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಏಕಕಾಲದಲ್ಲಿಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳನ್ನು ಸಂಪೂರ್ಣ ನೈರ್ಮಲ್ಯವನ್ನಾಗಿಸುವುದು. ಪ್ರತಿ ಗ್ರಾಮಗಳನ್ನು ಸ್ವಚ್ಛ, ಸುಂದರ ನೈರ್ಮಲ್ಯವಾಗಿ ರೂಪಿಸುವುದು ಧ್ಯೇಯವಾಗಿದೆ. 60ರಿಂದ 70 ಸಾಂಕ್ರಾಮಿಕ ರೋಗಗಳು ಗ್ರಾಮೀಣ ಪ್ರದೇಶದಲ್ಲಿಬರುತ್ತಿವೆ. ನೈರ್ಮಲ್ಯತೆಯ ಪ್ಯಾರಾಮೀಟರ್ ನಲ್ಲಿಗ್ರಾಮೀಣ ಪ್ರದೇಶದ ಜನತೆಗೆ ಅರಿವು ಕಡಿಮೆ ಇದೆ. ಅದ್ದರಿಂದ ಈ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿಹೆಚ್ಚಾಗಿ ಆಯೋಜಿಸಬೇಕು ’’ಎಂದರು.
ಇದೇ ಸಂದರ್ಭದಲ್ಲಿವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರ ಅಂತರವಳ್ಳಿ ಸಿದ್ದೇಶ್ವರ ದೇವಸ್ಥಾನದವರೆಗೆ ಸ್ವಚ್ಛತಾ ಜಾಗೃತಿ ಜಾಥಾ ನಡೆಸಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿಸ್ವಚ್ಛತಾ ಶ್ರಮದಾನ ನಡೆಯಿತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೃಷ್ಣಮೂರ್ತಿ, ಜಿಲ್ಲಾಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಸಂಯೋಜಕರಾದ ಚನ್ನೇಗೌಡ, ತಮ್ಮಣ್ಣ, ಶಿವಕುಮಾರ್ , ಸಂಜೀವಿನಿ ತಾಲೂಕು ವ್ಯವಸ್ಥಾಪಕ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪುಟ್ಟಸ್ವಾಮಿ, ಸಿಬ್ಬಂದಿ ಶ್ರೀಧರ್ , ಕುಮಾರ, ಸಿದ್ದಪ್ಪ, ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು.
ಚಿತ್ರ-1-2
ಅಂತರವಳ್ಳಿಯಲ್ಲಿಸ್ವಚ್ಛ ಭಾರತ್ ಅಭಿಯಾನಕ್ಕೆ ಇಒ ಶ್ರೀನಿವಾಸ್ ಚಾಲನೆ ನೀಡಿದರು.