ಅಂಗಡಿಗಳ ಶೆಟರ್ ಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಕೃತ್ಯ ನಡೆದ ಕೇವಲ ಮೂರು ದಿನಗಳಲ್ಲೇ ಬಂಧಿಸುವಲ್ಲಿಕೋಲಾರ ನಗರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಸೈಯ್ಯದ್ ಸಲ್ಮಾನ್ ಅಲಿಯಾಸ್ ಪೈಲ್ವಾನ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಲಾರ-ಟೇಕಲ್ ಮುಖ್ಯರಸ್ತೆಯ ಚೌಡೇಶ್ವರಿ ನಗರದಲ್ಲಿರುವ ನಂದಿನಿ ಮಿಲ್ ್ಕ ಪಾರ್ಲರ್ ನಲ್ಲಿಆ.31ರ ರಾತ್ರಿ ಕಳ್ಳತನ ನಡೆದಿತ್ತು. ಅಂಗಡಿ ಮಾಲೀಕ ಧರ್ಮಪ್ರಕಾಶ್ ಅವರು ಸೆ.1ರ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಶೆಟ್ಟರ್ ನ ಬೀಗ ಮುರಿದಿರುವುದು ಹಾಗೂ ಡ್ರಾಯರ್ ನಲ್ಲಿದ್ದ 30 ಸಾವಿರ ನಗದು ಕಳುವಾಗಿರುವುದು ಗಮನಕ್ಕೆ ಬಂದಿತ್ತು. ಇದೇ ವೇಳೆ ಟೇಕಲ್ ಸರ್ಕಲ್ ನಲ್ಲಿರುವ ಬಿರಿಯಾನಿ ಹೋಟೆಲ್ ಹಾಗೂ ಧರ್ಮಸ್ಥಳ ಬೇಕರಿಯ ಶೆಟ್ಟರ್ ಗಳನ್ನೂ ಮುರಿದು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಎಸ್ಪಿ ಕನ್ನಿಕಾ ಸಿಕ್ರಿವಾಲ್ , ಐಪಿಎಸ್ ಅವರ ಮಾರ್ಗದರ್ಶನದಲ್ಲಿಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಹಾಗೂ ಕೋಲಾರ ಉಪ ವಿಭಾಗದ ಡಿವೈಎಸ್ಪಿ ವಿ.ಕೃಷ್ಣಪ್ಪ ಅವರ ಮೇಲ್ವಿಚಾರಣೆಯಲ್ಲಿನಗರ ಠಾಣೆ ಇನ್ ಸ್ಪೆಕ್ಟರ್ ಲೋಕೇಶ್ ಎಂ.ಜಿ., ಪಿಎಸ್ ಐ ಸಂಗಪ್ಪ ಮೇಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ವಿಚಾರಣೆ ವೇಳೆ ಆರೋಪಿ ಕೋಲಾರ ನಗರ ಹಾಗೂ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದ್ದ ಕಳವು ಪ್ರಕರಣಗಳಲ್ಲಿಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 14 ಕಳವು ಪ್ರಕರಣಗಳಲ್ಲಿಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಘಿಸಿದ್ದಾರೆ.
=
ಫೋಟೋಕ್ಯಾಪ್ಷನ್ : ಅಂಗಡಿಗಳ ಶೆಟ್ಟರ್ ಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಕೃತ್ಯ ನಡೆದ ಕೇವಲ ಮೂರು ದಿನಗಳಲ್ಲೇ ಬಂಧಿಸುವಲ್ಲಿಕೋಲಾರ ನಗರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. (4ಕೆಪಿಎಚ್ 2)