ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿಸ್ಥಳೀಯ ಕೇಂದ್ರೀಯ ಗ್ರಾಮೀಣ ಕುಂಬಾರಿಕೆ ಸಂಸ್ಥೆಯಿಂದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಅಧಿಕಾರಿ ಮಹೇಶ ರಾಚಣ್ಣವರ ಮತ್ತು ವೆಂಕಟೇಶ ಕುಂಬಾರ ವಿದ್ಯಾರ್ಥಿಗಳಿಗೆ ಕುಂಬಾರಿಕೆ ಕಲೆಯ ಮಹತ್ವ , ಕುಂಬಾರಿಕೆ ತರಬೇತಿ ಕಾರ್ಯಕ್ರಮಗಳು, ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಸಿಗುವ ಸೌಲಭ್ಯಗಳು ಮತ್ತು ಕುಂಬಾರಿಕೆ ಸೇರಿದಂತೆ ಪಿಎಂ ವಿಶ್ವಕರ್ಮ ಯೋಜನೆಯಡಿ ಬರುವ ಉದ್ಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಂಸ್ಥೆಯ ತರಬೇತಿ ಅಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳಿಗೆ ಕುಂಬಾರಿಕೆ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷತೆ ಪ್ರಸ್ತುತಪಡಿಸಿದರು. ಕಾಲೇಜಿನ ಪ್ರಾಚಾರ್ಯ ಎಸ್ .ಕೆ ಅಕಿವಾಟ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ, ಉಪನ್ಯಾಸಕರಾದ ಶ್ರೀಧರ ಚಿಂಚಣಿ, ಎಫ್ .ಡಿ ತಳವಾರ, ಕುಮಾರ ಹಿರೇಮಠ, ಆರತಿ ನಿಲಜಕರ, ವಿದ್ಯಾ ಕಾಮೋಜಿ, ಉಮಾಕಿರಣ, ಶಂಕರಾಚಾರ್ಯ, ರಮೇಶ ಕಾಳೆ ಹಾಗೂ ವಿದ್ಯಾರ್ಥಿಗಳು, ಕುಂಬಾರಿಕೆ ಸಂಸ್ಥೆಯ ಸಿಬ್ಬಂದಿ ಇದ್ದರು.
- 8ಖಾನಾಪುರ 3
ಖಾನಾಪುರದ ಸರಕಾರಿ ಪಿಯು ಕಾಲೇಜಿನಲ್ಲಿಜರುಗಿದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿಕೇಂದ್ರೀಯ ಗ್ರಾಮೀಣ ಕುಂಬಾರಿಕೆ ಸಂಸ್ಥೆಯ ತರಬೇತಿ ಅಧಿಕಾರಿಗಳು ಕುಂಬಾರಿಕೆ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.