ಎಸ್ ಐಆರ್ ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಒತ್ತಾಯಿಸಿ ಇಂಡಿಯಾ ಒಕ್ಕೂಟದ ಪಕ್ಷಗಳು ನಗರದಲ್ಲಿಪಾದಯಾತ್ರೆ, ಬಹರಿಂಗ ಸಭೆ ನಡೆಸಿ ಪ್ರತಿಭಟನೆ ನಡೆಸಿದವು.
ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ, ಜ್ಞಾನೇಶ್ ಕುಮಾರ್ ಅವರ ಬಂಧನದ ಪ್ಲೇಕಾರ್ಡ್ ಹಿಡಿದು ಕಾಂಗ್ರೆಸ್ , ರೈತ ಸಂಘ, ಸಿಪಿಐ, ಸಿಪಿಐಎಂ, ಸೂಸಿ ಸೇರಿ ನಾನಾ ಪಕ್ಷಗಳ ಕಾರ್ಯಕರ್ತರು ಜಯದೇವ ವೃತ್ತದಿಂದ ಪಾದಯಾತ್ರೆ ಆರಂಭಿಸಿದರು. ಅಂಬೇಡ್ಕರ್ ವೃತ್ತ, ಗುಂಡಿ ವೃತ್ತ, ಡೆಂಟಲ್ ಕಾಲೇಜು ರಸ್ತೆ ಮೂಲಕ ವಿದ್ಯಾನಗರ ಗಾಂಧಿ ಪ್ರತಿಮೆ ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿ, ವೋಟ್ ಚೋರಿ ಬಿಜೆಪಿ ಎಂದು ಘೋಷಣೆ ಮೊಳಗಿಸಿದರು. ದೇಶ ದಿವಾಳಿ ಮಾಡಿದರೋ ಬಿಜೆಪಿಯವರು, ಭಾರತ ಒತ್ತೆ ಇಟ್ಟಾರೋ ಎಂದು ಕಂಜರ ಬಡಿದು ಹೋರಾಟದ ಹಾಡು ಹಾಡಿದರು.
ಚುನಾವಣೆ ಆಯೋಗ ಇರುವುದೇ ಜನ ಸಾಮಾನ್ಯರ ಮತದಾನ ಹಕ್ಕುಗಳನ್ನು ರಕ್ಷಿಸಲು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಒಂದು ಪಕ್ಷದ ಜತೆ ಸೇರಿ ಪಕ್ಷಪಾತದಿಂದ ವರ್ತಿಸಿ ಜನ ಸಾಮಾನ್ಯರ ಮತದಾನ ಹಕ್ಕನ್ನು ನಾಶ ಮಾಡಿದೆ. ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಫಾರಂ ನಂ.6ರಲ್ಲಿಮಾಡಿರುವ ಹಗರಣವನ್ನು ಸ್ವತಃ ಸುಪ್ರಿಕೋರ್ಟ್ ಹೇಳಿದೆ. ಆದರೂ ಅವರ ಮೇಲೆ ಕ್ರಮ ತೆಗೆದು ಕೊಳ್ಳುತ್ತಿಲ್ಲ, ಇವರನ್ನು ವಜಾ ಮಾಡಬೇಕು, ಎಸ್ ಐಆರ್ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವೋಟ್ ಚೋರಿ ಮಾಡಿದೆ, ಈ ಭ್ರಷ್ಟ ಬಿಜೆಪಿ ಜನತಂತ್ರ ವಿರೋಧಿಸುವ ಪ್ಯಾಸಿಸ್ಟ್ ಧೋರಣೆಗೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಇದನ್ನು ವಿರೋಧಿಸಿ ದೇಶಾದ್ಯಂತ ಜನತೆ ಮತ್ತು ಪ್ರತಿಪಕ್ಷಗಳು, ಸಿಜೆಪಿ ಸೇರಿ ನಾನಾ ಸಂಘಟನೆಗಳು, ಯವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಮುಖ್ಯ ಚುನಾವಣಾಧಿಕಾರಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.