ಕಾಸರಗೋಡು : ಮಾಲಿಕ್ ದೀನಾರ್ ಫಾರ್ಮಸಿ ಕಾಲೇಜ್ ಹಾಗೂ ಇಂಡಿಯನ್ ಫಾರ್ಮಸಿ ಟೀಚರ್ಸ್ ಅಸೊಸಿಯೇಶನ್ ನ ಸಂಯುಕ್ತಾಶ್ರಯದಲ್ಲಿ ಔಷಧಶಾಸ್ತ್ರ ವಿಚಾರ ಸಂಕಿರಣ ನಡೆಯಿತು. ಇಂಡಿಯನ್ ಫಾರ್ಮಸಿ ಸಮಿತಿಯ ಕೇಂದ್ರೀಯ ಸಮಿತಿ ಸದಸ್ಯ ಡಾ. ಸಲೀಮುಲ್ಲಾಖಾನ್ ಉದ್ಘಾಟಿಸಿದರು. ಕಾಲೇಜು ಪ್ರಿನ್ಸಿಪಾಲ… ಡಾ. ಅಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಅಮೆರಿಕದ ಕಾರ್ಯೋನ್ ಬಯೋ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ದಕ್ಷಿಣಮೂರ್ತಿ, ನೋವಾರ್ಟಿಸ್ ಹೆಲ್ತ್ ಕೇರ್ ನ ಸೀನಿಯರ್ ಮ್ಯಾನೇಜರ್ ಹರಿಹರನ್ ಪೊನ್ನಂಬಲಂ ತರಗತಿ ನಡೆಸಿದರು. ಡಾ. ವಳ್ಳಿ ಮನಾಳನ್ , ಡಾ.ಐ. ಆರತಿ, ಡಾ. ಸುಜಿತ್ ಎಸ್ . ನಾಯರ್ , ಡಾ. ಸೆಬಾಸ್ಟಿಯನ್ , ಪ್ರೊ. ಅಲನ್ ಜೇಕಬ್ , ಡಿ.ಕೆ. ಶಂಸುದ್ದೀನ್ ಮತ್ತಿತರರು ಮಾತನಾಡಿದರು.ಚಿತ್ರ: 30ಕೆಎಸ್ ಎಲ್ ಸೆಮಿನಾರ್