Pm Should Obtain Resignation From Cec Cm Shivakumars Demand
ಪ್ರಧಾನಿಯವರು ಸಿಇಸಿ ರಾಜೀನಾಮೆ ಪಡೆಯಲಿ: ಸಿಎಂ
Contributed by: Keerthi Prasad|Vijaya Karnataka•
ಹೊಸದಿಲ್ಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಿ ರಾಷ್ಟ್ರಪತಿ ಭವನ ಸಮೀಪದ ವಿಜಯ್ ಚೌಕ್ ಬಳಿ ಶುಕ್ರವಾರ ರಾತ್ರಿ ನಡೆದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ , ‘‘ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಹಲವರು ಸಿಇಸಿ ಅವರ ಭೇಟಿಗೆ ಮನವಿ ಮಾಡಿದರೂ ಅವಕಾಶ ನೀಡಿಲ್ಲ. ಅವರೇನು ದೇವರೇ. ನಾನು ಕರ್ನಾಟಕದಲ್ಲಿರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿಲ್ಲವೇ. ಪ್ರತಿಪಕ್ಷಗಳ ನಾಯಕರನ್ನು ಆಯೋಗ ಭೇಟಿಯಾಗುವುದಿಲ್ಲಎಂದರೆ ಏನರ್ಥ. ಹಾಗಾಗಿ ಸಿಇಸಿ ಅವರಿಂದ ಏನೋ ತಪ್ಪು ನಡೆದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ,’’ ಎಂದು ಹೇಳಿದರು.‘‘ಪ್ರಧಾನಿಯವರು ಕೂಡಲೇ ರಾಜೀನಾಮೆ ನೀಡುವಂತೆ ಸಿಇಸಿಗೆ ಸೂಚಿಸಬೇಕು. ಅದು ಪ್ರಧಾನಿಯವರು ಕರ್ತವ್ಯ ಕೂಡ. ಸಿಇಸಿ ಸ್ಥಾನದಲ್ಲಿರುವವರು ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬೇಕು. ಆದರೆ ಜ್ಞಾನೇಶ್ ಕುಮಾರ್ ಅವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದು, ಅಂತಿಮವಾಗಿ ಅವರು ರಾಜೀನಾಮೆ ನೀಡಬೇಕು. ಪ್ರಧಾನಿಯವರು ಸಿಇಸಿ ಅವರ ರಾಜೀನಾಮೆ ಪಡೆದು ಮನೆಗೆ ಕಳುಹಿಸಬೇಕು. ಪ್ರತಿಪಕ್ಷಗಳ ನಾಯಕರು, ಪ್ರಮುಖರೊಂದಿಗೆ ಚರ್ಚಿಸಿ ಮುಕ್ತ, ಪಾರದರ್ಶಕ ಚುನಾವಣಾ ವ್ಯವಸ್ಥೆ ತರುವತ್ತ ಪ್ರಯತ್ನಗಳಾಗಬೇಕು. ಎಸ್ ಐಆರ್ ರದ್ದುಪಡಿಸಬೇಕು,’’ ಎಂದು ಆಗ್ರಹಿಸಿದರು.
**
ಸಿಇಸಿ ವಿರುದ್ಧ ಹೋರಾಟವನ್ನು ನಾವು ಪಕ್ಷದ ಹೋರಾಟವಾಗಿ ನಡೆಸಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಜೀವಂತವಾಗಿದೆ ಎಂದು ಸಾರಲು ಹೋರಾಟ ನಡೆಸಲಾಗಿದೆ. ಮುಖ್ಯಮಂತ್ರಿಯಾಗಿ ಎಲ್ಲಅರ್ಹ ಮತದಾರರ ಹಕ್ಕು ಕಾಪಾಡುವಂತೆ ಮಾರ್ಗದರ್ಶನ ಮಾಡಿದ್ದೇನೆ. ಯಾರೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ನಮಗೆ ಯಾವ ಅನಧಿಕೃತ ಮತಗಳು ಬೇಡ.