ಅಂಚೇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ

Contributed by: nagarajvk43@gmail.com|Vijaya Karnataka•
provide funding for the construction of the post office building in kukanoor
ಅಂಚೇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ

ಸಂಸದ ರಾಜಶೇಖರ ಹಿಟ್ನಾಳಿಗೆ ನಾಗರಿಕರ ಮನವಿ
ವಿಕ ಸುದ್ದಿಲೋಕ ಕುಕನೂರು

ತಾಲೂಕು ಕೇಂದ್ರವಾದ ಪಟ್ಟಣದ ಮುಖ್ಯ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಸ್ಥಳೀಯ ನಾಗರಿಕರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಮುಖ್ಯ ಅಂಚೆ ಕಚೇರಿಗೆ ಒಂದು ಸ್ವಂತ ಕಟ್ಟಡವಿಲ್ಲದೆ ಇರುವುದು ಬೇಸರದ ಸಂಗತಿ. ಈ ಕಚೇರಿಯು ಬಾಡಿಗೆ ಮನೆಯಲ್ಲಿಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳು ನಿಲ್ಲಲೂ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ‘‘ಪಿಎಂ ವಿಶ್ವಕರ್ಮ ಯೂಜನೆ’’ಯಡಿ ಕುಶಲಕರ್ಮಿಗಳಿಗೆ ವಿತರಿಸಲು ಬರುತ್ತಿರುವ ಟೂಲ್ ಕಿಟ್ ಗಳನ್ನು ಸುರಕ್ಷಿತವಾಗಿ ಇಡಲು ಜಾಗವಿಲ್ಲದಂತಾಗಿದೆ. ಕುಕನೂರು ಪಟ್ಟಣ ಪಂಚಾಯಿತಿಯವರು ಅಂಚೆ ಇಲಾಖೆಗೆ ಜಾಗ ಮಂಜೂರು ಮಾಡಿದ್ದು, ಜಾಗ ಲಭ್ಯವಿದ್ದರೂ ಅಂಚೆ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗದ ಕಾರಣ ಕೆಲಸ ನನೆಗುದಿಗೆ ಬಿದ್ದಿದೆ. ಕೂಡಲೇ 50 ಲಕ್ಷ ರೂ. ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಜಿ.ಪಂ.ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ , ಪ್ರಮುಖರಾದ ಅಂದಪ್ಪ ಜವಳಿ, ರವಿ ಜಕ್ಕಾ, ಶಂಕರಗೌಡ ಇದ್ದರು.

ಧಿ-

ಕೆಪಿಎಲ್ 08ಕೆಕೆಎನ್ ಪೋಟೊ: 2 ಕುಕನೂರು ತಾಲೂಕು ಕೇಂದ್ರವಾದ ಪಟ್ಟಣದ ಮುಖ್ಯ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಸ್ಥಳೀಯ ನಾಗರಿಕರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ

ಮನವಿ ಸಲ್ಲಿಸಿದರು.