ವಿಕ ಸುದ್ದಿಲೋಕ ಕೊಳ್ಳೇಗಾಲಸರಕಾರದಿಂದ ಆಯೋಜಿಸಿರುವ ಮಹಾರಾಷ್ಟ್ರ ಜಿಲ್ಲೆಯ ನಾಗಪುರದಲ್ಲಿರುವ ಡಾ.ಬಿ.ಆರ್ .ಅಂಬೇಡ್ಕರ್ ಅವರ ದೀಕ್ಷಾ ಭೂಮಿ ಯಾತ್ರೆಗೆ ಸೋಮವಾರ ಬೆಳಗ್ಗೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಯಾತ್ರಾರ್ಥಿಗಳಿಗೆ ಶುಭಾಶಯ ಕೋರಿ, ‘‘ಐದು ದಿನಗಳ ಈ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಸುರಕ್ಷಿತವಾಗಿ ವಾಪಸಾಗಿ,’’ ಎಂದು ಸಲಹೆ ನೀಡಿದರು.
ಬಳಿಕ ಯಾತ್ರಾರ್ಥಿಗಳ ಬಸ್ ಹೊರಡುವ ಮುನ್ನ ಶಾಸಕ ಎ.ಆರ್ .ಕೃಷ್ಣಮೂರ್ತಿ ಅವರು ವಿಡಿಯೊ ಕಾಲ್ ಮೂಲಕ ಎಲ್ಲರಿಗೂ ಶುಭ ಕೋರಿದರು. ಅಂತೆಯೇ, ಶಾಸಕರ ಸಹೋದರ ಜಿ.ಪಂ ಮಾಜಿ ಸದಸ್ಯ ಆರ್ .ಬಾಲರಾಜು ಮತ್ತು ನಗರಸಭಾ ಮಾಜಿ ಅಧ್ಯಕ್ಷ ಎಸ್ .ರಮೇಶ್ , ಅಂಬೇಡ್ಕರ್ ಅವರು ಧಮ್ಮ ದೀಕ್ಷೆ ಪಡೆದಿರುವ ಪುಣ್ಯ ಭೂಮಿಗೆ ಭೇಟಿ ನೀಡಿ, ಭಗವಾನ್ ಬುದ್ಧ ಹಾಗೂ ಅಂಬೇಡ್ಕರ್ ಅವರ ಕುರಿತಾದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮನವಿ ಮಾಡಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ ಮಾತನಾಡಿ, ‘‘ಕೊಳ್ಳೇಗಾಲ ತಾಲೂಕಿನಿಂದ 2 ಬಸ್ ಹಾಗೂ ಯಳಂದೂರು ತಾಲೂಕಿನಿಂದ ಒಂದು ಬಸ್ ಸೇರಿ ಒಟ್ಟು 135 ಮಂದಿ ಯಾತ್ರಾರ್ಥಿಗಳು ಹಾಗೂ ಹನೂರು ತಾಲೂಕಿನಿಂದ 3 ಬಸ್ ನಲ್ಲಿಒಟ್ಟು 135 ಮಂದಿ ಚಾಮರಾಜನಗರ ತಾಲೂಕಿನಿಂದ 3 ಬಸ್ ಮತ್ತು ಗುಂಡ್ಲುಪೇಟೆ ತಾಲೂಕಿನಿಂದ 1 ಬಸ್ ಸೇರಿ ಜಿಲ್ಲೆಯಿಂದ ಒಟ್ಟು 450 ಮಂದಿ ಅಂಬೇಡ್ಕರ್ ಹಾಗೂ ಬುದ್ಧರ ಅನುಯಾಯಿಗಳು ಅಂಬೇಡ್ಕರ್ ದೀಕ್ಷೆ ಪಡೆದ ಸ್ಥಳಕ್ಕೆ ತೆರಳಲು ನಮ್ಮ ಇಲಾಖೆ ಪ್ರತಿ ವರ್ಷದಂತೆ ಅವಕಾಶ ಕಲ್ಪಿಸಿದೆ ,’’ ಎಂದು ಮಾಹಿತಿ ನೀಡಿದರು.
19ಕೆಜಿಎಲ್ -1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದಿಂದ ಮಹಾರಾಷ್ಟ್ರ ಜಿಲ್ಲೆಯ ನಾಗಪುರದಲ್ಲಿರುವ ಡಾ.ಬಿ.ಆರ್ .ಅಂಬೇಡ್ಕರ್ ಅವರ ದೀಕ್ಷಾ ಭೂಮಿ ಯಾತ್ರೆಗೆ ಸೋಮವಾರ ಬೆಳಗ್ಗೆ ಬಸ್ ನಲ್ಲಿಹೊರಟ ಯಾತ್ರಾರ್ಥಿಗಳಿಗೆ ಹಸಿರು ನಿಶಾನೆ ತೋರಿದ ಉಪ ವಿಭಾಗಾಧಿ ಕಾರಿ ದಿನೇಶ್ ಕುಮಾರ್ ಮೀನಾ ಅವರು ಶುಭಕೋರಿದರು.