ರಾಯಚೂರು- ಲಕ್ಷ್ಮಿ ವೆಂಕಟೇಶ್ವರ ದೇಗುಲದಲ್ಲಿಪೂಜೆ

Contributed by: manjunathsalic@gmail.com|Vijaya Karnataka•
grand navratri celebration at lakshmi venkateshwara temple in raichur
ಲಕ್ಷ್ಮಿ ವೆಂಕಟೇಶ್ವರ ದೇಗುಲದಲ್ಲಿಪೂಜೆ

ರಾಯಚೂರು : ನಗರದ ಬ್ರೇಸ್ತವಾರಪೇಟೆ ಉಪ್ಪಾರವಾಡಿಯ ಲಕ್ಷಿತ್ರ್ಮ ವೆಂಕಟೇಶ್ವರ ದೇವಸ್ಥಾನದಲ್ಲಿದಸರಾ ಹಬ್ಬದ 55ನೇ ನವರಾತ್ರಿ ಉತ್ಸವವನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ 9.30ಕ್ಕೆ ವೆಂಕಟೇಶ್ವರಸ್ವಾಮಿಗೆ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ದೇವಸ್ಥಾನದಲ್ಲಿಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಭಕ್ತರು ಹಾಗೂ ಭಜನಾ ಮಂಡಳಿಯಿಂದ ಅಶ್ವವಾಹನ ಪಲ್ಲಕ್ಕಿ ಸೇವೆ ಜರುಗಿತು. ವೆಂಕಟೇಶ್ವರಸ್ವಾಮಿ ರಥೋತ್ಸವ ದೇವಸ್ಥಾನದಿಂದ ಗೀತಾಮಂದಿರವರೆಗೆ ಹೊರಟು, ಮರಳಿ ದೇವಸ್ಥಾನ ತಲುಪಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಲ್ಲಪ್ಪ (ಆದೋನಿ), ಎಂ.ವೆಂಕಟೇಶ, ಎಂ.ಈರಣ್ಣ, ಪಾಗುಂಟಪ್ಪ, ದೇವೇಂದ್ರಪ್ಪ, ಯು.ವೆಂಕೋಬ, ಚಂದ್ರಶೇಖರಮಾಡಿಗಿರಿ, ಬಿ.ಪ್ರವೀಣ್ ಕುಮಾರ್ , ಕೆ.ಆಂಜನೇಯ, ಬಿ.ಜಿ.ನಾಗರಾಜ್ , ಬಿ.ಶ್ರೀನಿವಾಸ, ಗಟ್ಟುಶ್ರೀನಿವಾಸ, ಯು.ಶ್ರೀನಿವಾಸ, ವೆಂಕಟೇಶ ಗಧಾರ್ , ಗಟ್ಟುರಾಘವೇಂದ್ರ, ಶಶಿಧರ್ (ಗಡಗಿ), ಚಿದಾನಂದ, ಆರ್ . ಶ್ರೀನಿವಾಸ, ಗಟ್ಟು ಶಂಕರ್ , ಟಿ.ಎನ್ .ರಂಗನಾಥ, ನವೀನ್ ಇತರರಿದ್ದರು.