ಪ್ರಶ್ನೆ ಪತ್ರಿಕೆ ರಚಿಸಲು ವಾರದ ಗಡುವು!

Contributed by: aatish.kannale@timesgroup.com|Vijaya Karnataka•
weeks deadline to prepare question papers special opportunity for 2003 failures
- 2003ರಲ್ಲಿಅನುತ್ತೀರ್ಣರಾದವರಿಗೂ ಪರೀಕ್ಷೆ ಬರೆಯಲು ಅವಕಾಶ | ಹಳೆಯ ಪಠ್ಯಕ್ರಮವೇ ಇಲ್ಲದೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಹೇಗೆ?

ಪ್ರಶ್ನೆ ಪತ್ರಿಕೆ ರಚಿಸಲು ವಾರದ ಗಡುವು!
ಆತೀಶ್ ಬಿ.ಕನ್ನಾಳೆ ಶಿವಮೊಗ್ಗ

aaಠಿಜಿsh.ka್ಞ್ಞa್ಝಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಯಾವುದೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕಾದರೆ, ಒಂದಿಷ್ಟು ಕಾಲಾವಕಾಶ, ವ್ಯವಧಾನದಿಂದ ಯೋಚಿಸಲು ಸಮಯಾವಕಾಶವಾದರೂ ಇರಬೇಕು. ಇಲ್ಲದಿದ್ದರೆ, ಪ್ರಮಾದಗಳಾಗುವ ಸಾಧ್ಯತೆ ಹೆಚ್ಚು. ಈ ಚಿಕ್ಕ ಅಂಶವನ್ನೂ ಕುವೆಂಪು ವಿಶ್ವವಿದ್ಯಾಲಯ ಅರ್ಥ ಮಾಡಿಕೊಂಡಿಲ್ಲ.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ವಿವಿಧ ವಿಷಯಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಮುಂಚೆಯೇ ಸೂಚಿಸಲಾಗಿದೆ. ಆದರೆ, ಕನ್ನಡ ವಿಭಾಗದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಬರೀ ಒಂದು ವಾರದ ಗಡುವು ನೀಡಿರುವುದ ಪ್ರಾಧ್ಯಾಪಕರು ತಬ್ಬಿಬ್ಬಾಗುವಂತೆ ಮಾಡಿದೆ.

ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕಾಗಿ ಬೋರ್ಡ್ ಆಫ್ ಎಕ್ಸಾಮಿನೇಷನ್ (ಬಿಒಇ) ರಚಿಸಲಾಗುತ್ತದೆ. ಅದಕ್ಕೆ ಆಯಾ ವಿಷಯದ ಹಿರಿಯ ಪ್ರಾಧ್ಯಾಪಕರು ಮುಖ್ಯಸ್ಥರಾಗಿರುತ್ತಾರೆ. ಆ ಮಂಡಳಿಯಲ್ಲಿಸದಸ್ಯರೂ ಇರುತ್ತಾರೆ. ಅಲ್ಲಿನಿರ್ಧರಿಸಿದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಸಂಬಂಧಪಟ್ಟ ಪ್ರಾಧ್ಯಾಪಕರಿಗೆ ಅಂಚೆ ಮೂಲಕ ಸೂಚನೆ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಪದವಿ ಪರೀಕ್ಷೆಗಳು ನವೆಂಬರ್ ನಲ್ಲಿಆರಂಭವಾಗಲಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕಳಿಸಲು ಅಕ್ಟೋಬರ್ 25ರ ವರೆಗೆ ಕಾಲಾವಕಾಶ ನೀಡಲಾಗಿದೆ. ವಿಚಿತ್ರವೆಂದರೆ, ಕೆಲವು ಪ್ರಾಧ್ಯಾಪಕರಿಗೆ ನಿಧಾನವಾಗಿ ಅಂಚೆ ತಲುಪುತ್ತಿದೆ. ಪರಿಣಾಮ ಐದಾರು ದಿನಗಳಲ್ಲಿಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಾಮಾನ್ಯವಾಗಿ ಬಿಒಇ ಮುಖ್ಯಸ್ಥರನ್ನಾಗಿ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿರುವ ಹಿರಿಯ ಪ್ರಾಧ್ಯಾಪಕರು ಅಥವಾ ಪ್ರಾಂಶುಪಾಲರನ್ನು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅಂಚೆ ಮೂಲಕವೇ ವ್ಯವಹರಿಸಲಾಗುತ್ತದೆ. ಅದರಿಂದಾಗಿ ಈ ಸಲ ಕನ್ನಡ ವಿಭಾಗದ ಪ್ರಕ್ರಿಯೆ ವಿಳಂಬವಾಗಿದೆ ಎನ್ನುತ್ತವೆ ಕೆಲವು ಮೂಲಗಳು.

ಈ ಸಲ 2003ರಲ್ಲಿಪದವಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದರಿಂದ 300-400 ಜನ ಪರೀಕ್ಷಾರ್ಥಿಗಳು ಹಾಜರಾಗಲಿದ್ದಾರೆ. ಅವರಿಗಾಗಿ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿ ವಿವಿಯ ಮೇಲಿದೆ. ಅಧಿಕ ಹೊರೆಯ ಹಿನ್ನೆಲೆಯಲ್ಲಿಕಳೆದ 10-12 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹೊಣೆಗಾರಿಕೆ ನೀಡಲಾಗಿದೆ. ಆದರೆ, ಅದರೊಂದಿಗೆ ಪ್ರಶ್ನೆ ಪತ್ರಿಕೆ ಲಗತ್ತಿಸಲಾಗಿದೆಯೇ ವಿನಾ ಹಳೆಯ ಪಠ್ಯಕ್ರಮ ಕಳಿಸಿಲ್ಲ. ಹೀಗಾಗಿ, ಅಲ್ಪ ಅವಧಿಯಲ್ಲಿಪಠ್ಯಕ್ರಮ ಹುಡುಕಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು ಕಷ್ಟಸಾಧ್ಯ.

* ಪ್ರಮಾದದ ಆತಂಕ:

ಒಂದೆಡೆ ಅಲ್ಪಾವಧಿ ನೀಡಿರುವುದು ಹಾಗೂ ಹಳೆಯ ಪಠ್ಯವನ್ನೇ ನೀಡದಿರುವುದರಿಂದ ಪ್ರಶ್ನೆ ಪತ್ರಿಕೆಯಲ್ಲಿಪ್ರಮಾದವಾಗುವ ಸಾಧ್ಯತೆಯೂ ಇರುತ್ತದೆ. ಒಂದುವೇಳೆ, ಪ್ರಾಧ್ಯಾಪಕರು ತರಾತುರಿಯಲ್ಲಿಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಿ ಪ್ರಮಾದವರಾದರೆ ಅವರಿಗೆ ದಂಡ ವಿಧಿಸುವುದು ಮಾತ್ರವಲ್ಲದೆ ಐದು ವರ್ಷ ನಿರ್ಬಂಧ ಹೇರಲಾಗುತ್ತದೆ. ಪ್ರಾಧ್ಯಾಪಕರಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿಯೂ ಇದ್ದು, ಒತ್ತಡದ ನಡುವೆ ಅಲ್ಪ ಅವಧಿಯಲ್ಲಿಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿದೆ. ಈ ಎಲ್ಲಅಂಶಗಳೆಡೆ ವಿಶ್ವವಿದ್ಯಾಲಯ ಗಮನಹರಿಸಬೇಕಿದೆ.

===

(ಕೋಟ್ )

ಅತಿಥಿ ಉಪನ್ಯಾಸಕರಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಅವಕಾಶವೇ ಇಲ್ಲ. ಹಾಗೊಮ್ಮೆ ಮಾಡಿದ್ದಾರೆ ಎಂದಾದರೆ ಸಂಬಂಧಪಟ್ಟ ವಿಷಯದ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು. ಯಾವ ಹಂತದಲ್ಲಿಪ್ರಮಾದವಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಈ ಸಲ 2003-04ನೇ ಶೈಕ್ಷಣಿಕ ವರ್ಷದಲ್ಲಿಅನುತ್ತೀರ್ಣರಾದವರೂ ಪದವಿಧರರಾಗಲಿ ಎಂಬ ಉದ್ದೇಶದಿಂದ ‘ಡಬಲ್ ದಿ ಡ್ಯೂರೇಷನ್ ’ ಅಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಕನ್ನಡ ವಿಷಯವೊಂದರಲ್ಲೇ 300-400 ಪರೀಕ್ಷಾರ್ಥಿಗಳಿದ್ದಾರೆ. ಯಾವುದೇ ರೀತಿಯ ಪ್ರಮಾದಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.

- ಪ್ರೊ. ಆರ್ .ತಿಮ್ಮರಾಯಪ್ಪ, ಮೌಲ್ಯಮಾಪನ ಕುಲಸಚಿವ, ಕುವೆಂಪು ವಿವಿ , ಶಿವಮೊಗ್ಗ

===

(ಫೋಟೊ ಬರಲಿದೆ.)

===