ಶಾಲೆ ನೆಲಸಮವಾಗಿ ವರ್ಷ ಕಳೆದರೂ ಹೊಸ ಕಟ್ಟಡಕ್ಕೆ ಮುಹೂರ್ತವಿಲ್ಲ!
ಈ ಸರಕಾರಿ ಶಾಲೆ 7.30ಕ್ಕೇ ಶುರು!* ಅಸ್ಕಿಹಾಳ ಸರಕಾರಿ ಶಾಲೆಯಲ್ಲಿಕೊಠಡಿಗಳ ಕೊರತೆ
* ಬೆಳಗ್ಗೆ ಪ್ರೌಢ, ಮಧ್ಯಾಹ್ನ ಪ್ರಾಥಮಿಕ ಶಾಲಾ ತರಗತಿ
* ಶಾಲೆಯ ಒಟ್ಟು 250 ವಿದ್ಯಾರ್ಥಿಗಳ ಕಲಿಕೆಗೆ ಸಂಕಷ್ಟ
ಮಂಜುನಾಥ ಸಾಲಿ ರಾಯಚೂರು
ಞa್ಞ್ಜ್ಠ್ಞaಠಿh.sa್ಝಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಸರಕಾರದ ಆದೇಶದಂತೆ ರಾಜ್ಯದ ಎಲ್ಲಶಾಲೆಗಳು ಬೆಳಗ್ಗೆ 9ಕ್ಕೆ ಆರಂಭವಾಗುವುದು ವಾಡಿಕೆ. ಆದರೆ, ಅಸ್ಕಿಹಾಳದ ಸರಕಾರಿ ಪ್ರೌಢಶಾಲೆ ಬೆಳಗ್ಗೆ 7.30ಕ್ಕೇ ಶುರುವಾಗುತ್ತದೆ!
ಈ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ವರ್ಷದ ಹಿಂದೆಯೇ ಸಂಪೂರ್ಣ ನೆಲಸಮಗೊಳಿಸಲಾಗಿದೆ. ಆದರೆ, ಈವರೆಗೂ ನೂತನ ಕಟ್ಟಡ ನಿರ್ಮಾಣವಾಗದ ಪರಿಣಾಮ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ಪಾಳಿ ಪ್ರಕಾರ ಒಂದೇ ಕಟ್ಟಡದಲ್ಲಿತರಗತಿಗೆ ಹಾಜರಾಗುತ್ತಿದ್ದಾರೆ. ಕೊಠಡಿಗಳ ಕೊರತೆಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತರಗತಿಗಳನ್ನು ಅನಿವಾರ್ಯವಾಗಿ ಎರಡು ಅವಧಿಗಳಲ್ಲಿನಡೆಸಲಾಗುತ್ತಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಹೊರಾಂಗಣದಲ್ಲಿಮರದಡಿ ಕುಳಿತು ಪಾಠ ಕೇಳುವ ಪರಿಸ್ಥಿತಿಯಿದೆ.
ಏನಿದು ಸಮಸ್ಯೆ?:
ರಾಯಚೂರು-ಲಿಂಗಸುಗೂರು ಮುಖ್ಯರಸ್ತೆಯಲ್ಲಿರುವ ಅಸ್ಕಿಹಾಳ ಗ್ರಾಮದ ಒಂದೇ ಆವರಣದಲ್ಲಿಪ್ರಾಥಮಿಕ ಹಾಗೂ ಪ್ರೌಢಶಾಲೆ ನಡೆಯುತ್ತಿವೆ. ಪ್ರೌಢಶಾಲೆಯ ಬೆರಳೆಣಿಕೆಯ ಕೊಠಡಿಗಳನ್ನೇ ಎರಡೂ ಶಾಲೆಗಳ ತರಗತಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಬೆಳಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ ಪ್ರೌಢಶಾಲೆಯ ತರಗತಿಗಳು ನಡೆಯುತ್ತವೆ. ಬಳಿಕ ಮಧ್ಯಾಹ್ನ 12.30ರಿಂದ ಸಂಜೆ 5.10ರವರೆಗೆ ಅದೇ ಕೊಠಡಿಗಳಲ್ಲಿಪ್ರಾಥಮಿಕ ಶಾಲೆಯ ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿಗಳ ಕೊರತೆಯಿಂದಾಗಿ ಕೆಲವೊಮ್ಮೆ ವಿದ್ಯಾರ್ಥಿಗಳು ಹೊರಗೆ, ಮರದ ನೆರಳಿನಲ್ಲಿಕುಳಿತು ಪಾಠ ಕೇಳಬೇಕಾಗಿದೆ. ಕೂಲಿ ಕೆಲಸಕ್ಕೆ ತೆರಳುವ ಪೋಷಕರು ತಮ್ಮ ಮಕ್ಕಳನ್ನು ಬೆಳ್ಳಂಬೆಳಗ್ಗೆ ಶಾಲೆಗೆ ಕಳುಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಮಧ್ಯಾಹ್ನವೇ ಶಾಲೆಯಿಂದ ಮನೆಗೆ ಬರುವ ಮಕ್ಕಳ ಗಮನಹರಿಸಲಾಗದ ಚಿಂತೆ ಅವರನ್ನು ಕಾಡುತ್ತಿದೆ.
ಅನುದಾನವಿದ್ದರೂ ಕಾಮಗಾರಿ ಆರಂಭವಿಲ್ಲ:
ಕಟ್ಟಡ ನೆಲಸಮಗೊಳಿಸುವ ಮುನ್ನ ಶಿಥಿಲಗೊಂಡಿದ್ದ ಕೊಠಡಿಗಳಿಗೆ ದುರಸ್ತಿ ಮಾಡುವ ಚಿಂತನೆ ನಡೆದಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಕಟ್ಟಡ ಕೆಡವಿದ ಬಳಿಕ ದುರಸ್ತಿಗಾಗಿ ಬಿಡುಗಡೆಯಾದ 4.50 ಲಕ್ಷ ರೂ. ಗಳನ್ನು ಹೇಗೆ ಬಳಸಬೇಕು ಎಂಬ ಪ್ರಶ್ನೆಯೂ ಎದುರಾಗಿದೆ. ಇದಾದ ಬಳಿಕ ನೂತನ ಕಟ್ಟಡ ನಿರ್ಮಾಣಕ್ಕಾಗಿ 1.65 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರೆ, ಕಾಮಗಾರಿ ಆರಂಭವಾಗದೆ ಇರುವುದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಾಥಮಿಕ ಶಾಲೆಯ 160 ಮತ್ತು ಪ್ರೌಢಶಾಲೆಯ 90 ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಕೊರತೆಯ ನಡುವೆಯೇ ಕಲಿಯಬೇಕಾದ ಪರಿಸ್ಥಿತಿಯಿದೆ.
---
ಕೋಟ್ ...
ನೂತನ ಕಟ್ಟಡ ನಿರ್ಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರೆ, ನನ್ನ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಶಿಕ್ಷಣ ಇಲಾಖೆಯವರು ಎಚ್ಚರಿಕೆ ನೀಡಿದ್ದಾರೆ. ದುರಸ್ತಿಗಾಗಿ ಬಿಡುಗಡೆಯಾಗಿದ್ದ 4.50 ಲಕ್ಷ ರೂ.ಗಳಲ್ಲಿತಾತ್ಕಾಲಿಕ ಶೆಡ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ನಾನಾ ಸಂಘಟನೆಗಳ ಬೆಂಬಲದೊಂದಿಗೆ ಶಾಲೆಗೆ ಬೀಗ ಜಡಿದು ಹೋರಾಟ ನಡೆಸಲಾಗುವುದು.
- ಸೂರ್ಯನಾರಾಯಣ ಅಧ್ಯಕ್ಷ, ಎಸ್ ಡಿಎಂಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಸ್ಕಿಹಾಳ
---
ಹಳೆಯ ಕಟ್ಟಡ ನೆಲಸಮಗೊಳಿಸಿದ ಬಳಿಕ ಉಂಟಾದ ಕೊಠಡಿಗಳ ಕೊರತೆಯಿಂದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತರಗತಿಗಳನ್ನು ಎರಡು ಅವಧಿಗಳಲ್ಲಿನಡೆಸಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕಾಗಿ 1.65 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೆಕೆಆರ್ ಡಿಬಿಯಿಂದ ಅನುಮೋದನೆ ದೊರೆತ ಬಳಿಕ ಶಾಲೆಯ ಕಟ್ಟಡ ಕಾಮಗಾರಿ ಕೈಗೊಳ್ಳಲಾಗುವುದು.
- ಮಲ್ಲಿಕಾರ್ಜುನ ಡಿಡಿಪಿಐ, ರಾಯಚೂರು
---
ಆರ್ ಸಿಎಚ್ 18ಎಂಎಸ್ 01
ಅಸ್ಕಿಹಾಳದ ಸರಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ನೆಲಸಮಗೊಳಿಸಿರುವ ದೃಶ್ಯ.
---
ಆರ್ ಸಿಎಚ್ 18ಎಂಎಸ್ 02
ಪ್ರೌಢಶಾಲೆಯ ಕೊಠಡಿಗಳಲ್ಲೇ ನಡೆಯುತ್ತಿರುವ ಪ್ರಾಥಮಿಕ ಶಾಲೆಯ ತರಗತಿ.