ಮಾನ್ವಿ: ‘‘ರಾಜ್ಯದಲ್ಲಿಸರಕಾರದ ಆಡಳಿತದ ಜತೆಗೆ ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರೂ ಪರ್ಯಾಯವಾಗಿ ನಮ್ಮನ್ನು ಆಳುತ್ತಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಂಟು ವರ್ಷಗಳಿಂದ ರಾಜ್ಯದ ಜನರಿಗೆ ಪ್ರಶ್ನೆ ಮಾಡುವುದನ್ನು ಹೇಳಿಕೊಟ್ಟಿದೆ. ಜನರು ಧೈರ್ಯದಿಂದ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ,’’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್ . ತಿಳಿಸಿದರು.ಪಟ್ಟಣದ ಟೌನ್ ಹಾಲ್ ನಲ್ಲಿಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿಅವರು ಮಾತನಾಡಿದರು. ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವಚಿತ್ರದ ಮೆರವಣಿಗೆ ನಡೆಸಿದರು. ಕೆಆರ್ ಎಸ್ ರಾಜ್ಯ ಉಪಾಧ್ಯಕ್ಷ ಸೋಮ ಸುಂದರ್ , ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ರಾಜ್ಯ ಎಸ್ಸಿ, ಎಸ್ಟಿ ಮೋರ್ಚಾ ಅಧ್ಯಕ್ಷ ಗಣೇಶ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗಂಗಮ್ಮ, ಬಸವಪ್ರಭು, ದ್ಯಾವಣ್ಣ ವಲ್ಕಂದಿನ್ನಿ, ಶಿವರಾಜ, ವಿಜಯ ಪಾಟೀಲ್ , ವಿಜಯ ಪೋಳ, ಗಣೇಶ, ಅಮೃತ, ಜಗನ್ನಾಥ, ಶ್ರೀನಿವಾಸರೆಡ್ಡಿ, ಕಟ್ಟೆ ಬಸಪ್ಪ, ರಾಧಾ, ಪಂಪಾಪತಿ, ರಮೇಶ ನಾಯಕ, ವೆಂಕಟೇಶ, ಗಂಗಮ್ಮ, ಬಸವರಾಜ ಸ್ವಾಮಿ, ಸಾಬಣ್ಣ, ಕುಮಾರ ನಾಯಕ, ಅಲ್ಲಾಭಕ್ಷಿ, ಶರಣಪ್ಪ ಕವಿತಾಳ ಇತರರಿದ್ದರು.
---
18ಮಾನ್ವಿ1:
ಮಾನ್ವಿ ಪಟ್ಟಣದ ಟೌನ್ ಹಾಲ್ ನಲ್ಲಿಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಘಟಕದಿಂದ ನಡೆದ ಕಲ್ಯಾಣ ಕರ್ನಾಟಕ ತ್ಸವವನ್ನು ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್ . ಉದ್ಘಾಟಿಸಿದರು.