ವಿಭೂತಿಪುರ ಶ್ರೀ (ಪು. 4 ಬಾಟಂ)

Contributed byShridevi Ambekallu|Vijaya Karnataka
spiritual intelligence the essence and importance of life
ಆಧ್ಯಾತ್ಮಿಕ ಬುದ್ಧಿಮತ್ತೆ

----
ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಜಿ

ಶ್ರೀಮದ್ ವಿಭೂತಿಪುರಮಠ ಬೆಂಗಳೂರು, ಶ್ರೀ ಪಟ್ಟೀಕಂಥಿ ಹಿರೇಮಠ, ಮನಗೂಳಿ

----

ಇಂಟ್ರೋ: ಏನಿದು ಆಧ್ಯಾತ್ಮಿಕ ಬುದ್ಧಿಮತ್ತೆ? ಎಐ ಮೆರೆಯುತ್ತಿರುವ ಕಾಲಘಟ್ಟದಲ್ಲಿಎಸ್ ಐ ಬದುಕಿಗೆ ಎಷವ್ಟು ಮುಖ್ಯ?

---------------------

ಈ ಬ್ರಹ್ಮಾಂಡದಲ್ಲಿರುವ 84 ಲಕ್ಷ ಜೀವಜಾಲಗಳಲ್ಲಿಮನುಷ್ಯನಿಗೆ ವಿಶಿಷ್ಟ ಸ್ಥಾನವಿದೆ. ಆತನನ್ನು ಸೃಷ್ಟಿಯ ಕಿರೀಟವೆಂದು ಪರಿಗಣಿಸಲಾಗಿದೆ. ಈ ಕುರಿತು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಶ್ರೀ ಸಿದ್ಧಾಂತ ಶಿಖಾಮಣಿ’ಯಲ್ಲಿ, ‘ದುರ್ಲಭಂ ಮಾನುಷಂ ಪ್ರಾಪ್ಯ ಜನನಂ ಜ್ಞಾನಸಾಧನಂ’ ಎಂದು ಹೇಳಿದ್ದಾರೆ. ಅಂದರೆ, ಜ್ಞಾನಸಾಧನೆಗೆ ಅವಕಾಶ ಕಲ್ಪಿಸುವ ಮನುಷ್ಯಜನ್ಮ ಅತ್ಯಂತ ದುರ್ಲಭವಾದುದು.

ಮನುಷ್ಯನ ಈ ವಿಶೇಷತೆಗೆ ಆತನಲ್ಲಿರುವ ಅಪಾರ ಬುದ್ಧಿಶಕ್ತಿಯೂ ಒಂದು ಕಾರಣ. ಸಾಮಾನ್ಯವಾಗಿ ಜ್ಞಾನವನ್ನು ಸಂಪಾದಿಸುವುದು, ತರ್ಕಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಬುದ್ಧಿಮತ್ತೆ ಎಂದು ಕರೆಯುತ್ತೇವೆ. ಆದರೆ ಜೀವನವು ಕೇವಲ ಬುದ್ಧಿಶಕ್ತಿಯಿಂದಲೇ ಸಾಗುವುದಿಲ್ಲ. ಬುದ್ಧಿಯನ್ನು ಸರಿಯಾದ ದಿಕ್ಕಿನಲ್ಲಿಬಳಸುವ ವಿವೇಕವೂ ಅಗತ್ಯ. ಈ ವಿವೇಕವನ್ನು ಬೆಳೆಸುವ ಶಕ್ತಿಯೇ ಆಧ್ಯಾತ್ಮಿಕ ಬುದ್ಧಿಮತ್ತೆ.

ಆಧ್ಯಾತ್ಮಿಕ ಬುದ್ಧಿಮತ್ತೆ ಎಂದರೇನು?

ಆತ್ಮಜ್ಞಾನವನ್ನು ಪಡೆಯಲು, ಪರಮಾತ್ಮನನ್ನು ಅರಿಯಲು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಮಾಡುವ ಅಭ್ಯಾಸಗಳನ್ನು ಆಧ್ಯಾತ್ಮಿಕ ಸಾಧನೆಗಳೆಂದು ಕರೆಯಬಹುದು. ನಿತ್ಯ ಯೋಗಾಭ್ಯಾಸ, ಭಗವಂತನ ಪೂಜೆ, ಧ್ಯಾನ, ಆತ್ಮಚಿಂತನೆ, ಸತ್ಸಂಗ ಮತ್ತು ಸೇವೆ ಇವು ಆಧ್ಯಾತ್ಮಿಕ ಸಾಧನೆಯ ವಿವಿಧ ಮಾರ್ಗಗಳಾಗಿವೆ. ಇಂತಹ ಸಾಧನೆಗಳು ಮನುಷ್ಯನ ಅಂತರಂಗವನ್ನು ಅರಿಯಲು ನೆರವಾಗುತ್ತವೆ. ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ, ಆತ್ಮವಿಶ್ವಾಸ, ತಾಳ್ಮೆ ಮತ್ತು ವಿವೇಕವನ್ನು ಬೆಳೆಸಲು ಸಹಕಾರಿಯಾಗುತ್ತವೆ.

ಎಷ್ಟೇ ವಿದ್ಯಾವಂತನಾಗಿರಲಿ, ಶ್ರೀಮಂತನಾಗಿರಲಿ, ಅಧಿಕಾರ ಮತ್ತು ಸ್ಥಾನಮಾನ ಹೊಂದಿರಲಿ, ‘ನಾನು ಯಾರು? ನನ್ನ ಜೀವನದ ಉದ್ದೇಶವೇನು? ನಾನು ಹೇಗೆ ಬದುಕಬೇಕು? ನನ್ನ ಬದುಕಿನಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು?’ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದಿದ್ದರೆ ಜೀವನದಲ್ಲಿಒಂದು ಬಗೆಯ ಆಂತರಿಕ ಶೂನ್ಯತೆ ಉಳಿಯಬಹುದು. ಈ ಶೂನ್ಯತೆಯನ್ನು ತುಂಬುವ, ಜೀವನದ ಅರ್ಥವನ್ನು ಅರಿತು ಮೌಲ್ಯಗಳೊಂದಿಗೆ ಬದುಕಲು ಪ್ರೇರೇಪಿಸುವ ಆಂತರಿಕ ಶಕ್ತಿಯೇ ಆಧ್ಯಾತ್ಮಿಕ ಬುದ್ಧಿಮತ್ತೆ.

ಭಾವನಾತ್ಮಕ ಬುದ್ಧಿಮತ್ತೆ

ಮಾನವನ ಬುದ್ಧಿಮತ್ತೆಯನ್ನು ಸಾಮಾನ್ಯವಾಗಿ ಐಕ್ಯೂ (ಐ್ಞಠಿಛ್ಝ್ಝಿಜಿಜಛ್ಞ್ಚಿಛಿ ಕ್ಠಿಟಠಿಜಿಛ್ಞಿಠಿ) ಮೂಲಕ, ಭಾವನಾತ್ಮಕ ಸಾಮರ್ಥ್ಯವನ್ನು ಉಕಿ (ಘ್ಕಿಉಞಟಠಿಜಿಟ್ಞa್ಝ ಕ್ಠಿಟಠಿಜಿಛ್ಞಿಠಿ) ಮೂಲಕ ವಿವರಿಸಲಾಗುತ್ತದೆ. ಅದೇ ರೀತಿ, ಜೀವನದ ಆಳವಾದ ಅರ್ಥವನ್ನು ಅರಿಯುವ ಸಾಮರ್ಥ್ಯವನ್ನು ಘ್ಕಿಖಕಿ (ಖpಜ್ಟಿಜಿಠ್ಠಿa್ಝ ಕ್ಠಿಟಠಿಜಿಛ್ಞಿಠಿ) ಅಥವಾ ಆಧ್ಯಾತ್ಮಿಕ ಬುದ್ಧಿಮತ್ತೆ ಎಂದು ಕರೆಯಲಾಗುತ್ತದೆ.

ಘ್ಕಿಐಕಿ ನಮಗೆ ‘ಏನು ಮಾಡಬೇಕು?’ ಎಂಬುದನ್ನು ತಿಳಿಸಬಹುದು. ಘ್ಕಿಉಕಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಬಹುದು. ಆದರೆ ಘ್ಕಿಖಕಿ, ‘ನಾನು ಇದನ್ನು ಏಕೆ ಮಾಡಬೇಕು? ಇದರ ಹಿಂದಿರುವ ಮೌಲ್ಯವೇನು?’ ಎಂದು ಪ್ರಶ್ನಿಸಲು ಪ್ರೇರೇಪಿಸುತ್ತದೆ.

ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿಯಿಂದ ದೊಡ್ಡ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಆದರೆ ಹಣ ಮತ್ತು ಅಧಿಕಾರಕ್ಕಾಗಿ ಅನ್ಯಾಯದ ಮಾರ್ಗವನ್ನು ಅನುಸರಿಸಿದರೆ ಆತನ ಬುದ್ಧಿಮತ್ತೆ ಸಮಾಜಕ್ಕೆ ಹಾನಿಕಾರಕವಾಗಬಹುದು. ಆಧ್ಯಾತ್ಮಿಕ ಬುದ್ಧಿಮತ್ತೆ ಬೆಳೆದಿದ್ದರೆ, ‘ನನ್ನ ಯಶಸ್ಸು ಇತರರ ಬದುಕಿಗೆ ಹಾನಿ ಮಾಡಬಾರದು’ ಎಂಬ ವಿವೇಕ ಆತನಲ್ಲಿಮೂಡುತ್ತದೆ.

ಆತ್ಮಜ್ಞಾನವೇ ಮೊದಲ ಹೆಜ್ಜೆ

ಆಧ್ಯಾತ್ಮಿಕ ಬುದ್ಧಿಮತ್ತೆಯ ಮೂಲ ಆತ್ಮಜ್ಞಾನ . ‘ನಾನು ಯಾರು?’ ಎಂಬ ಪ್ರಶ್ನೆ ಸರಳವಾಗಿ ಕಂಡರೂ ಅದರ ಆಳ ಅಪಾರವಾಗಿದೆ.

ಮನುಷ್ಯ ಸಾಮಾನ್ಯವಾಗಿ ತನ್ನ ಹೆಸರು, ಹುದ್ದೆ, ಕುಟುಂಬ, ಆಸ್ತಿ, ವಿದ್ಯೆ ಅಥವಾ ಸಾಮಾಜಿಕ ಸ್ಥಾನಮಾನದ ಮೂಲಕ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಆದರೆ ಇವೆಲ್ಲವೂ ಬದಲಾಗುವಂಥವು. ಹುದ್ದೆ ಬದಲಾಗಬಹುದು, ಸಂಪತ್ತು ಕಡಿಮೆಯಾಗಬಹುದು, ದೇಹ ವಯಸ್ಸಾಗಬಹುದು, ಪರಿಸ್ಥಿತಿಗಳು ಬದಲಾಗಬಹುದು.

ಆಧ್ಯಾತ್ಮಿಕ ಬುದ್ಧಿಮತ್ತೆಯ ಮಹತ್ವ

ಸಂಕಷ್ಟದ ಸಮಯದಲ್ಲಿವ್ಯಕ್ತಿಯ ನಿಜವಾದ ಆಂತರಿಕ ಶಕ್ತಿ ಪ್ರಕಟವಾಗುತ್ತದೆ. ಜೀವನದಲ್ಲಿಸೋಲು, ಅನಾರೋಗ್ಯ, ಆರ್ಥಿಕ ತೊಂದರೆ, ಸಂಬಂಧಗಳ ಸಮಸ್ಯೆ, ಅಪಮಾನ ಅಥವಾ ನಿರಾಶೆ ಎದುರಾದಾಗ ‘ಏಕೆ ನನಗೆ ಮಾತ್ರ ಹೀಗಾಗುತ್ತಿದೆ?’ ಎಂದು ಪ್ರಶ್ನಿಸುವುದು ಸಹಜ. ಆದರೆ ಆಧ್ಯಾತ್ಮಿಕ ಬುದ್ಧಿಮತ್ತೆ ಬೆಳೆದ ವ್ಯಕ್ತಿ ಅದೇ ಪರಿಸ್ಥಿತಿಯನ್ನು ಒಂದು ಪಾಠವಾಗಿ ನೋಡಲು ಪ್ರಯತ್ನಿಸುತ್ತಾನೆ. ಎಲ್ಲಪರಿಸ್ಥಿತಿಗಳನ್ನೂ ನಮ್ಮ ಇಚ್ಛೆಯಂತೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಕಲಿಯಬಹುದು. ಈ ಅರಿವು ಸಂಕಷ್ಟಗಳನ್ನು ಎದುರಿಸುವಾಗ ಮನಸ್ಸಿಗೆ ಸ್ಥೈರ್ಯ ನೀಡುತ್ತದೆ.

ಮೌಲ್ಯಾಧಾರಿತ ನಿರ್ಧಾರಗಳು

‘ನನಗೆ ಇದನ್ನು ಮಾಡಲು ಸಾಧ್ಯವೇ?’ ಎಂಬ ಪ್ರಶ್ನೆಯ ಜೊತೆಗೆ ‘ನಾನು ಇದನ್ನು ಮಾಡಬೇಕೇ?’ ಎಂಬ ಪ್ರಶ್ನೆಯನ್ನೂ ಕೇಳುವಂತೆ ಆಧ್ಯಾತ್ಮಿಕ ಬುದ್ಧಿಮತ್ತೆ ಪ್ರೇರೇಪಿಸುತ್ತದೆ. ಇದರಿಂದ ನಿರ್ಧಾರಗಳನ್ನು ಕೇವಲ ಲಾಭ-ನಷ್ಟಗಳ ಆಧಾರದ ಮೇಲೆ ತೆಗೆದುಕೊಳ್ಳದೆ, ನ್ಯಾಯ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಪರಿಶೀಲಿಸಲು ಸಾಧ್ಯವಾಗುತ್ತದೆ. ಯಶಸ್ಸು ಎಂದರೆ ಇತರರನ್ನು ಮೀರಿಸುವುದಷ್ಟೇ ಅಲ್ಲ. ತನ್ನ ಬೆಳವಣಿಗೆಯ ಜೊತೆಗೆ ಇತರರ ಬದುಕಿಗೂ ಬೆಳಕಾಗುವುದು.

ಆಧ್ಯಾತ್ಮಿಕತೆಯ ಅಭಿವ್ಯಕ್ತಿ

ಆಧ್ಯಾತ್ಮಿಕ ಬುದ್ಧಿಮತ್ತೆ ಬೆಳೆದಾಗ ಹೃದಯದಲ್ಲಿಕರುಣೆ ಬೆಳೆಯುತ್ತದೆ. ಇತರರ ನೋವನ್ನು ಕೇವಲ ಹೊರಗಿನಿಂದ ನೋಡುವುದಕ್ಕಿಂತ, ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಸಾಧ್ಯವಾದಷ್ಟು ನೆರವಾಗಲು ಮನಸ್ಸು ಮುಂದಾಗುತ್ತದೆ. ಸೇವೆ ಎಂದರೆ ದೊಡ್ಡ ದಾನ ಮಾಡುವುದಲ್ಲ. ಹಸಿದವನಿಗೆ ಅನ್ನ ನೀಡುವುದು, ದುಃಖಿತನಿಗೆ ಸಾಂತ್ವನ ಹೇಳುವುದು, ಜ್ಞಾನ ನೀಡುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಪ್ರಕೃತಿಯನ್ನು ರಕ್ಷಿಸುವುದು ಮತ್ತು ಇನ್ನೊಬ್ಬರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಕೂಡ ಸೇವೆಯೇ.

ಶಿಕ್ಷಣದಲ್ಲಿಆಧ್ಯಾತ್ಮಿಕ ಬುದ್ಧಿಮತ್ತೆ

ಶಿಕ್ಷಣ ಕ್ಷೇತ್ರದಲ್ಲಿಆಧ್ಯಾತ್ಮಿಕ ಬುದ್ಧಿಮತ್ತೆಗೆ ವಿಶೇಷ ಸ್ಥಾನವಿದೆ. ಶಿಕ್ಷಕರು ಮಕ್ಕಳ ಚಿಂತನೆ, ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ರೂಪಿಸುವವರೂ ಆಗಿದ್ದಾರೆ. ಪ್ರಾಮಾಣಿಕತೆ, ಶಿಸ್ತು, ಕರುಣೆ, ಸಹನೆ, ಜವಾಬ್ದಾರಿ ಮತ್ತು ಪರಸ್ಪರ ಗೌರವದಂತಹ ಮೌಲ್ಯಗಳನ್ನು ಮಕ್ಕಳಲ್ಲಿಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಯೊಂದಿಗೆ ಆಧ್ಯಾತ್ಮಿಕ ಬುದ್ಧಿಮತ್ತೆಯನ್ನೂ ಬೆಳೆಸುವ ಪ್ರಯತ್ನ ಅಗತ್ಯ.

ನಾಯಕತ್ವದಲ್ಲಿಆಧ್ಯಾತ್ಮಿಕ ಬುದ್ಧಿಮತ್ತೆ

ಆಧ್ಯಾತ್ಮಿಕ ಬುದ್ಧಿಮತ್ತೆ ಹೊಂದಿರುವ ನಾಯಕನು ತನ್ನ ಸ್ಥಾನವನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ನೋಡದೆ, ಒಂದು ಜವಾಬ್ದಾರಿಯಾಗಿ ಸ್ವೀಕರಿಸುತ್ತಾನೆ. ಅಧಿಕಾರವನ್ನು ಇತರರನ್ನು ನಿಯಂತ್ರಿಸಲು ಬಳಸುವುದಕ್ಕಿಂತ ಅವರ ಬೆಳವಣಿಗೆಗೆ ನೆರವಾಗಲು ಪ್ರಯತ್ನಿಸುತ್ತಾನೆ.

ತಪ್ಪು ಮಾಡಿದಾಗ ಒಪ್ಪಿಕೊಳ್ಳುವುದು, ಇತರರ ಯಶಸ್ಸನ್ನು ಹೃದಯಪೂರ್ವಕವಾಗಿ ಮೆಚ್ಚುವುದು, ಟೀಕೆಯನ್ನು ಸ್ವೀಕರಿಸುವುದು ಮತ್ತು ಕಠಿಣ ನಿರ್ಧಾರಗಳನ್ನು ನ್ಯಾಯದ ಆಧಾರದ ಮೇಲೆ ತೆಗೆದುಕೊಳ್ಳುವುದು ನಾಯಕನ ಗುಣಗಳಾಗಿವೆ.

ಆಧ್ಯಾತ್ಮಿಕ ಬುದ್ಧಿಮತ್ತೆ ಬೆಳೆಸಿಕೊಳ್ಳುವುದು ಹೇಗೆ?

ಆಧ್ಯಾತ್ಮಿಕ ಬುದ್ಧಿಮತ್ತೆ ನಿರಂತರ ಅಭ್ಯಾಸದಿಂದ ಬೆಳೆಸಿಕೊಳ್ಳಬಹುದಾದ ಗುಣ. ಅದಕ್ಕಾಗಿ ದೈನಂದಿನ ಜೀವನದಲ್ಲಿಯೇ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು.

- ಪ್ರತಿದಿನ ಕೆಲವು ನಿಮಿಷಗಳ ಕಾಲ ಧ್ಯಾನ ಮತ್ತು ಆತ್ಮಚಿಂತನೆ ಮಾಡುವುದು.

-ದಿನದ ಕೊನೆಯಲ್ಲಿ‘ಇಂದು ನಾನು ಯಾರಿಗಾದರೂ ನೋವುಂಟುಮಾಡಿದ್ದೇನೆಯೇ? ಯಾರಿಗಾದರೂ ಸಹಾಯ ಮಾಡಿದ್ದೇನೆಯೇ? ಇಂದು ನಾನು ಏನು ಕಲಿತೆ?’ ಎಂದು ಸ್ವಯಂ ಪ್ರಶ್ನಿಸಿಕೊಳ್ಳುವುದು.

- ಉತ್ತಮ ಗ್ರಂಥಗಳ ಅಧ್ಯಯನ, ಸತ್ಸಂಗ ಮತ್ತು ಗುರುಗಳ ಮಾರ್ಗದರ್ಶನ ಪಡೆಯುವುದು.

- ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಮತ್ತು ಅದರ ಸೌಂದರ್ಯವನ್ನು ಆಸ್ವಾದಿಸುವುದು.

- ನಿಸ್ವಾರ್ಥ ಸೇವೆ, ಕೃತಜ್ಞತಾಭಾವ ಮತ್ತು ಮೌನವನ್ನು ಜೀವನದ ಭಾಗವಾಗಿಸಿಕೊಳ್ಳುವುದು.

ಇಂದಿನ ಜಗತ್ತಿಗೆ ಬುದ್ಧಿವಂತ ಜನರ ಕೊರತೆಯಿಲ್ಲ; ಆದರೆ ವಿವೇಕಿಗಳ, ಮೌಲ್ಯನಿಷÜ್ಠರ ಮತ್ತು ಕರುಣೆಯುಳ್ಳವರ ಅಗತ್ಯ ಹೆಚ್ಚಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಮನುಷ್ಯನಿಗೆ ಅಪಾರ ಶಕ್ತಿಯನ್ನು ನೀಡಿವೆ. ಆದರೆ ಆ ಶಕ್ತಿಯನ್ನು ಯಾವ ದಿಕ್ಕಿನಲ್ಲಿಬಳಸಬೇಕು ಎಂಬುದನ್ನು ನಿರ್ಧರಿಸಲು ಆಧ್ಯಾತ್ಮಿಕ ಬುದ್ಧಿಮತ್ತೆ ಅಗತ್ಯ. ಆಧ್ಯಾತ್ಮಿಕ ಬುದ್ಧಿಮತ್ತೆ ನಮಗೆ ಜೀವನದಿಂದ ಓಡಿಹೋಗುವುದನ್ನು ಕಲಿಸುವುದಿಲ್ಲ; ಬದಲಾಗಿ ಜೀವನದ ಮಧ್ಯದಲ್ಲಿಯೇ ಸಮತೋಲನದಿಂದ, ಧರ್ಮದಿಂದ ಮತ್ತು ಜವಾಬ್ದಾರಿಯಿಂದ ಬದುಕುವುದನ್ನು ಕಲಿಸುತ್ತದೆ. ಒಳಗಿನ ಶಾಂತಿ, ಜ್ಞಾನ, ವಿವೇಕ, ಪ್ರೀತಿ ಮತ್ತು ಸೇವಾಭಾವದ ಬೆಳವಣಿಗೆಯಲ್ಲಿದೆ ಎಂಬ ಸತ್ಯವನ್ನು ನಾವೆಲ್ಲಾಅರಿಯಬೇಕಿದೆ.