ದೋಷಪೂರಿತ ಸೈಲೆನ್ಸರ್ ಗಳ ಮೇಲೆ ರೋಡ್ರೋಲರ್ 60

Contributed by: raju.manjunath67@gmail.com|Vijaya Karnataka•
bangalore district operation to crush defective bike silencers
ದೋಷಪೂರಿತ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್

60 ಪ್ರಕರಣ ದಾಖಲು | ಕಾರ್ಯಾಚರಣೆ ತೀವ್ರಗೊಳಿಸಿದ ಸಂಚಾರಿ ಪೊಲೀಸರು
ವಿಕ ಸುದ್ದಿಲೋಕ, ರಾಮನಗರ: ಬೈಕ್ ಸೈಲೆನ್ಸರ್ ಗಳನ್ನು ಮಾರ್ಪಾಡು ಮಾಡಿ ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ಚುರಕುಗೊಳಿಸಿದ್ದಾರೆ. ಕಳೆದೊಂದು ತಿಂಗಳಲ್ಲಿ60ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಕ್ರೀಡಾಂಗಣದಲ್ಲಿಪೊಲೀಸರು ಜಪ್ತಿ ಮಾಡಿದ ಸೈಲೆನ್ಸ್ ರ್ ಗಳ ಮೇಲೆ ರೋಡ್ ರೋಲರ್ ಹರಿಸಿ ಧ್ವಂಸಗೊಳಿಸಿದ್ದಾರೆ. ಸಾರ್ವಜನಿಕರ ದೂರುಗಳು ಹೆಚ್ಚಾದ

ಹಿನ್ನೆಲೆಯಲ್ಲಿಪೊಲೀಸರು ಶಬ್ದಮಾಲಿನ್ಯ ಉಂಟುಮಾಡುವ ಇಂತಹ ಬೈಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಕೇಂದ್ರ ಮೋಟಾರು ವಾಹನಗಳ ನಿಯಮಾವಳಿಯ) ರೂಲ್ 120ರ ಪ್ರಕಾರ, ಎಲ್ಲವಾಹನಗಳು ನಿಗದಿತ ಶಬ್ದ ಮಿತಿ ಕಾಯ್ದುಕೊಳ್ಳುವುದು ಕಡ್ಡಾಯ. ಪರಿಸರ (ಸಂರಕ್ಷಣೆ)

ನಿಯಮಗಳ ಶೆಡ್ಯೂಲ್ 4 ಪ್ರಕಾರ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಗರಿಷ್ಠ 75-80 ಡೆಸಿಬಲ್ ಶಬ್ದ ಮಿತಿ ನಿಗದಿಪಡಿಸಲಾಗಿದೆ. ಅನುಮತಿಯಿಲ್ಲದೆ ಸೈಲೆನ್ಸರ್ ಬದಲಾಯಿಸುವುದು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 52ರ ಉಲ್ಲಂಘನೆಯಾಗುತ್ತದೆ. ಇದಕ್ಕೆ ಸೆಕ್ಷನ್ 190(2)ರ ಅಡಿಯಲ್ಲಿದಂಡ ವಿಧಿಸಲಾಗುತ್ತದೆ ಹಾಗೂ ಇಂತಹ ಮಾಡಿಫೈಡ್ ಭಾಗಗಳನ್ನು ಮಾರಾಟ ಮಾಡುವವರ ವಿರುದ್ಧ ಸೆಕ್ಷನ್ 182ಂ(4) ರ ಅಡಿಯಲ್ಲಿಕ್ರಮ ಜರುಗಿಸಲಾಗುತ್ತದೆ.

ಸೈಲೆನ್ಸರ್ ಗಳನ್ನು ಮಾರ್ಪಾಡು ಮಾಡಿ ಶಾಲಾ ಕಾಲೇಜುಗಳ ಬಳಿ, ಸಾರ್ವಜನಿಕ ಪ್ರದೇಶದಲ್ಲಿದುರುದ್ದೇಶ ಪೂರಿತವಾಗಿ ಶಬ್ದ ಉಂಟುಮಾಡುತ್ತಿದ್ದಾರೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಪಾದಾಚಾರಿಗಳಿಗೆ, ಹಿರಿಯ ನಾಗರೀಕರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದವು.

ಈ ಕುರಿತು ವಿಕದೊಂದಿಗೆ ಮಾತನಾಡಿದ ಸಂಚಾರಿ ಪೊಲೀಸ್ ಠಾಣೆ ಎಸ್ ಐ ಪುರಂದರ್ ಅವರು, ಕರ್ಕಶ ಶಬ್ದ ಮಾಡುವ ಬೈಕ್ ಗಳ ಕುರಿತು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದವು. ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನದಂತೆ ಇದರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ. 60ಕ್ಕೂ ಹೆಚ್ಚು ಬೈಕ್ ಗಳನ್ನು ಹಿಡಿದು ಪ್ರಕರಣ ದಾಖಲಿಸಿ, ಸೈಲೆನ್ಸರ್ ಗಳನ್ನು ನಾಶ ಮಾಡಿದ್ದೇವೆ. ಸೈಲೆನ್ಸ್ ರ್ ಗಳನ್ನು ಮಾರ್ಪಾಡು ಮಾಡುವ ಗ್ಯಾರೆಜ್ ಗಳ ವಿರುದ್ಧವೂ ಮುಂದಿನ ದಿನಗಳಲ್ಲಿಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಫೋಟೊ:

24ಆರ್ ಎನ್ ಆರ್ ಎಂ4:

ಜಪ್ತಿ ಮಾಡಲಾದ ಬೈಕ್ ಸೈಲೆನ್ಸರ್ ಗಳ ಮೇಲೆ ಜೂನಿಯರ್ ಕಾಲೇಜು ಮೈದಾನದಲ್ಲಿರೋಡ್ರೋಲರ್ ಹರಿಸಿ ಧ್ವಂಸಗೊಳಿಸಲಾಯಿತು.

24ಆರ್ ಎನ್ ಆರ್ ಎಂ5

ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಬೈಕ್ ಗಳನ್ನು ವಶಕ್ಕೆ ಪಡೆದ ಸಂಚಾರಿ ಪೊಲೀಸರು.