ಅನಂತಶಯನ ಪ್ರವೇಶದ್ವಾರ ಪ್ರಭಾವಳಿಗೆ ಶಂಕುಸ್ಥಾಪನೆ ಇಂದು

Contributed by: paddu.thippasandara@gmail.com|Vijaya Karnataka•
celebratory wishes for ananta chaturdashi foundation stone laid for ananthasayana entrance today
ಅನಂತಶಯನ ಪ್ರವೇಶದ್ವಾರ ಪ್ರಭಾವಳಿಗೆ ಶಂಕುಸ್ಥಾಪನೆ ಇಂದು

ಅನಂತ ಚತುರ್ದಶಿ ನಿಮಿತ್ತ ತಿರುಕಲ್ಯಾಣೋತ್ಸವ
ವಿಕ ಸುದ್ದಿಲೋಕ ಮಾಗಡಿ ಗ್ರಾಮಾಂತರ: ಮಾಗಡಿ ಹಾಗೂ ಕುಣಿಗಲ್ ತಾಲೂಕುಗಳ ಗಡಿಯಲ್ಲಿಬರುವ ಬುಕ್ಕಸಾಗರ ಗ್ರಾಮದ ವಿಜಯನಗರ ದೊರೆಗಳು ಪೋಷಿಸಿದ್ದ ಶ್ರೀ ಅನಂತಶಯನಸ್ವಾಮಿ ದೇವಸ್ಥಾನದಲ್ಲಿಅನಂತ ಚತುರ್ದಶಿ ಪ್ರಯುಕ್ತ ಸೆ.25 ರಂದು ಮುಖ್ಯಪ್ರವೇಶದ್ವಾರದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕೂಡಿಕೊಳ್ಳುವ ಮಾಗಡಿ ಹಾಗೂ ವಯಾ ಬುಕ್ಕಸಾಗರ ರಸ್ತೆ ದೇಗುಲದ ಬಳಿಯಲ್ಲಿಮುಖ್ಯ ಮಹಾಪ್ರವೇಶ ದ್ವಾರ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭಕ್ಕೆ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕುಣಿಗಲ್ ಶಾಸಕ ಡಾ.ರಂಗನಾಥ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ದೇಗುಲದಲ್ಲಿಮುಂಜಾನೆ ಅನಂತಶಯನಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ತಿರುಕಲ್ಯಾಣೋತ್ಸವ ದೇವರ ಮೆರವಣಿಗೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಜತೆಗೆ ಅನಂತ ಚತುರ್ದಶಿಗೆ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಬುಕ್ಕಸಾಗರ ಅನಂತಶಯನ ಸ್ವಾಮಿ ದೇಗುಲದಲ್ಲಿನೂತನ ದೇವಾಲಯ ನಿರ್ಮಾಣ, ರಾಜಗೋಪುರ ಹಾಗೂ ಮತ್ತು ದಾಸೋಹ ಮಂದಿರ, ಪಾಕಶಾಲೆ ನಿರ್ಮಾಣವಾಗಿದ್ದು ದೇವಾಲಯದ ಅಭಿವೃದ್ಧಿಗೆ ಅನಂತಶಯನ ಸ್ವಾಮಿ ಸೇವಾ ಸಂಸ್ಥೆ ಶ್ರಮಿಸುತ್ತಿದೆ. ಈಗ ಕುಣಿಗಲ್ ಹಾಗೂ

ಉತ್ತರೀದುರ್ಗ ರಸ್ತೆಯಲ್ಲಿಸಂಚರಿಸುವ ಸಾವಿರಾರು ಜನಗಳ ನೋಟಕ್ಕೆ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಅನಂತಶಯನ ಸ್ವಾಮಿ ದೇಗುಲದ ಕೂಗಳತೆ ದೂರದಲ್ಲಿಪಶ್ಚಿಮ ಭಾಗದ ಮುಖ್ಯ ರಸ್ತೆಯ ಆರಂಭದಲ್ಲಿಸುಂದರ ಮುಖ್ಯ ಪ್ರವೇಶ ದ್ವಾರದ ಪ್ರಭಾವಳಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಅನಂತಶಯನಸ್ವಾಮಿ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಂಗಶಾನಯ್ಯ ಮಾಹಿತಿ ನೀಡಿದ್ದಾರೆ.

24ಎಸ್ ಎಲ್ ಆರ್ 1

ನೂತನವಾಗಿ ನಿರ್ಮಿಸಲು ಇಚ್ಛಿಸಿರುವ ಅನಂತಶಯನಸ್ವಾಮಿ ಪ್ರವೇಶದ್ವಾರದ ನೀಲ ನಕ್ಷೆ.