ವಿಕ ಸುದ್ದಿಲೋಕ ಹೊಳೆಹೊನ್ನೂರುನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದು ನಮ್ಮೆಲ್ಲರ ಮನೆಯಿಂದ ಆರಂಭ ಆಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ಸುಮಿತ್ರಾ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಪಟ್ಟಣ ಪಂಚಾಯಿತಿಯಿಂದ ಸೋಮವಾರ ನಡೆಸಿದ ‘ಸ್ವಚ್ಛತೆಯೇ ಸೇವೆ-2026’ ಕಾರ ್ಯಕ್ರಮದಲ್ಲಿಅವರು ಮಾತನಾಡಿದರು.
ಸ್ವಚ್ಛಭಾರತ ಮಿಷನ್ ದೇಶದ ಎಲ್ಲರಲ್ಲಿಜಾಗೃತಿ ಉಂಟುಮಾಡುವುದರ ಮೂಲಕ ಸ್ವಚ್ಛ, ಆರೋಗ್ಯಪೂರ್ಣ ಪರಿಸರ ನಿರ್ಮಿಸುವ ಗುರಿ ಹೊಂದಿದೆ. ಈ ಬಗ್ಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿಅರಿವು ಮೂಡಿಸುವ ಸಲುವಾಗಿ ಇಂತಹ ಕಾರ ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಎನ್ .ಅಣ್ಣಪ್ಪಸ್ವಾಮಿ ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿ ಇಡದಿದ್ದರೆ ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತೇವೆ. ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿಉತ್ತಮ ವಾತಾವರಣಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ಲೆಕ್ಕಶೋಧಕ ಎಸ್ .ಪ್ರದೀಪ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಆರ್ .ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಕಾರ ್ಯಕ್ರಮಾಧಿಕಾರಿಗಳಾದ ಎನ್ .ಆರ್ .ಶಂಕರ, ಎ.ಕೆ.ಶಶಿಧರ್ , ಐಕ್ಯುಎಸಿ ಸಂಚಾಲಕಿ ಡಾ.ಪಿ.ಭಾರತಿ ದೇವಿ, ಉದ್ಯೋಗ ಕೋಶದ ಸಂಚಾಲಕ ಜಿ.ಎಸ್ .ತ್ರಿಶೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ಫೋಟೊ ಫೈಲ್ : 22ಎಚ್ ಎಚ್ ಆರ್ 1
ಹೊಳೆಹೊನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ‘ಸ್ವಚ್ಛತೆಯೇ ಸೇವೆ-2026’ ಕಾರ ್ಯಕ್ರಮವನ್ನು ಪ್ರಾಂಶುಪಾಲರಾದ ಡಾ.ಕೆ.ಆರ್ .ಪ್ರತಿಭಾ ಉದ್ಘಾಟಿಸಿದರು.