ಪ್ರಗತಿಯಲ್ಲಿಶತಮಾನೋತ್ಸವ ಭವನ ಕಾಮಗಾರಿ

Contributed by: vinu1273@gmail.com|Vijaya Karnataka•
construction of the centenary hall in kushalnagar is in progress
ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ವಿಕ ಸುದ್ದಿಲೋಕ ಕುಶಾಲನಗರ
ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಾಕ್ಸ್ ) 2025-26ನೇ ಸಾಲಿನ 105ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್ .ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿನಡೆಯಿತು.

ಎಪಿಸಿಎಂಎಸ್ ಸಭಾಂಗಣದಲ್ಲಿನಡೆದ ಕಾರ ್ಯಕ್ರಮದಲ್ಲಿಮಾತನಾಡಿದ ಟಿ.ಆರ್ .ಶರವಣಕುಮಾರ್ , ‘‘ಸಂಘವು 2025-26ನೇ ಸಾಲಿನಲ್ಲಿ1.11ಕೋಟಿ (1,11,87,757)ರೂ. ನಿವ್ವಳ ಲಾಭಗಳಿಸಿದೆ. 105ನೇ ವರ್ಷದಲ್ಲಿಮುನ್ನಡೆಯುತ್ತಿರುವ ಸಂಘ ಸತತವಾಗಿ 9ವರ್ಷಗಳಿಂದ ಕೋಟಿಗೂ ಮೀರಿ ಲಾಭ ಗಳಿಸುತ್ತಾ ಬಂದಿದೆ,’’ಎಂದು ವಿವರಿಸಿದರು.

‘‘ಸಂಘದ ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ2ಎಕರೆ ನಿವೇಶನದಲ್ಲಿಕೈಗೊಂಡಿರುವ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ 2027ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿಮುಕ್ತಾಯಗೊಳ್ಳಲಿದೆ. ಸಾಧ್ಯವಾದಲ್ಲಿಮುಖ್ಯಮಂತ್ರಿಗಳ ಮೂಲಕ ಉದ್ಘಾಟನೆಗೆ ಚಿಂತನೆ ನಡೆಯಲಿದೆ. ಸಂಘಕ್ಕೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿಅನುಮೋದನೆ ಪಡೆದುಕೊಳ್ಳಲಾಗುವುದು,’’ಎಂದು ತಿಳಿಸಿದರು.

ಮರಣ ನಿಧಿ ಹೆಚ್ಚಳ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಕೆ.ವಿ.ನೇತ್ರಾವತಿ, ನಿರ್ದೇಶಕರಾದ ವಿ.ಎಸ್ .ಆನಂದಕುಮಾರ್ , ಕೆ.ಎನ್ .ದೇವರಾಜ್ , ಎಂ.ಎಂ.ಚರಣ್ , ಪಿ.ಬಿ.ಯತೀಶ್ , ಪಿ.ಎಂ.ಕವಿತಾ, ಎಂ.ಎಸ್ .ರಾಜೇಶ್ , ಎಚ್ .ಎಂ.ಮಧುಸೂದನ್ , ಕೆ.ಜಿ.ಮನು, ಪ್ರಸನ್ನ, ರಾಮಕೃಷ್ಣ, ಮಹಮ್ಮದ್ ಇಬ್ರಾಹಿಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ , ಲೆಕ್ಕ ಪರಿಶೋಧಕ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

20 ಕೆಯುಎಸ್ 01 ಚಿತ್ರದಲ್ಲಿ

ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿಸಂಘದ ಅಧ್ಯಕ್ಷ ಟಿ.ಆರ್ .ಶರವಣಕುಮಾರ್ ಮಾತನಾಡಿದರು.