ಆಟೋಟದಲ್ಲಿಮಿಂದೆದ್ದ ಹಿರಿಯರು

Contributed by: phalalochanaradhya.ks@timesofindia.com|Vijaya Karnataka•
encouraging senior citizens to enhance enthusiasm through sports and cultural activities
ಆಟೋಟದಲ್ಲಿಮಿಂದೆದ್ದ ಹಿರಿಯರು

*ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿಪಾಲ್ಗೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ : ಜಿಲ್ಲಾಧಿಕಾರಿ ಶ್ರೀರೂಪಾ ಸಲಹೆ
ವಿಕ ಸುದ್ದಿಲೋಕ ಚಾಮರಾಜನಗರ

ಹಿರಿಯ ನಾಗರಿಕರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಪಾಲ್ಗೊಂಡು ದೈನಂದಿನ ಜೀವನವನ್ನು ಉಲ್ಲಾಸ, ಉತ್ಸಾಹದಿಂದ ಸಾಗಿಸುವ ಮೂಲಕ ಜೀವನೋತ್ಸಾಹ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾಧಿ ಕಾರಿ ಶ್ರೀರೂಪಾ ಸಲಹೆ ನೀಡಿದರು.

ನಗರದ ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿ ಆವರಣದಲ್ಲಿಗುರುವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಮತ್ತು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಹಿರಿಯ ನಾಗರಿಕರು ವಯಸ್ಸಾಗಿದೆ ಎಂದು ಜೀವನದಲ್ಲಿಉತ್ಸಾಹ ಕಳೆದುಕೊಳ್ಳದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಗಳಲ್ಲಿಹೆಚ್ಚಾಗಿ ಭಾಗವಹಿಸಬೇಕು. ಸೋಲು-ಗೆಲುವನ್ನು ಬದಿಗೆ ಸರಿಸಿ ಕ್ರೀಡಾಸ್ಪರ್ಧೆಗಳಲ್ಲಿಪಾಲ್ಗೊಳ್ಳುವುದರಿಂದ ಜೀವನದುದ್ದಕ್ಕೂ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯದ ಜೀವನದಲ್ಲಿಹೆಚ್ಚು ಲವಲವಿಕೆ ಹೊಂದಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬಹುದು’’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಮಾತನಾಡಿ, ‘‘ವಿಶ್ವ ಹಿರಿಯ ನಾಗರಿಕರ ದಿನವನ್ನು ಪ್ರತಿವರ್ಷ ಅ. 1ರಂದು ಆಚರಿಸಲಾಗುತ್ತದೆ. ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಸರಕಾರವು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿರಿಯ ನಾಗರಿಕರು ಸಮಾಜ ಹಾಗೂ ಕುಟುಂಬದ ಪ್ರಮುಖ ಆಧಾರಸ್ತಂಭಗಳಾಗಿದ್ದು, ದೈಹಿಕ, ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳಲು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಹಿರಿಯ ನಾಗರಿಕರಿಗೆ ಅವಶ್ಯವಾಗಿವೆ’’ ಎಂದರು.

ಜಿಲ್ಲಾಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ. ಕೆ.ಎನ್ . ಮಂಜುನಾಥ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಭದ್ರಾದೇವಿ, ಇತರರು ಹಾಜರಿದ್ದರು.

ಫೋಟೋ

ಉತ್ತುವಳ್ಳಿ ಮಹೇಶ್