ಮನೆಯಲ್ಲಿ1.7 ಕಿಲೋ ಗಾಂಜಾ ಪತ್ತೆ: ಮಹಿಳೆ ಸೆರೆ

Contributed by: gangadhar.korekkana@gmail.com|Vijaya Karnataka•
kasaragod 17 kilos of marijuana found at home woman arrested
ಕಾಸರಗೋಡು : ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿಮನೆಯಲ್ಲಿಬಚ್ಚಿಟ್ಟಿದ್ದ 1.718 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಾಣತ್ತೂರು ಪುತ್ತೂರಡ್ಕದ ಪಿ.ಸಿ.ಮೀನಾಕ್ಷಿ (47) ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಕಾಸರಗೋಡು ಅಬಕಾರಿ ಗುಪ್ತಚರ ಮತ್ತು ತನಿಖಾ ಬ್ಯೂರೋಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಅಬಕಾರಿ ಜಾರಿ ಮತ್ತು ಮಾದಕ ವಸ್ತು ವಿರೋಧಿ ದಳದ ಇನ್ ಸ್ಪೆಕ್ಟರ್ ವಿಷ್ಣು ಪ್ರಕಾಶ್ ನೇತೃತ್ವದ ಅಬಕಾರಿ ತಂಡ ಪಾಣತ್ತೂರು ಪುತ್ತೂರಡ್ಕದಲ್ಲಿದಾಳಿ ನಡೆಸಿದಾಗ ಆ ಮನೆಯ ಕೊಠಡಿಯೊಳಗೆ ಗಾಂಜಾ ಬಚ್ಚಿಟ್ಟಿರುವುದು ಪತ್ತೆಯಾಗಿದೆ.