ಸಂಡೂರುಧಿಧಿ- * ಪೌರ ಕಾರ್ಮಿಕರ ದಿನಾಚರಣೆ

Contributed by: verendragoud@gmail.com|Vijaya Karnataka•
municipal workers day celebration a tribute to dedicated service
‘ಪೌರ ಕಾರ್ಮಿಕರ ಸೇವೆ ಸದಾ ಸ್ಮರಣೀಯ’

ವಿಕ ಸುದ್ದಿಲೋಕ ಸಂಡೂರು
‘‘ಪೌರ ಕಾರ್ಮಿಕರು ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುತ್ತಿರುವುದರಿಂದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ,’’ ಎಂದು ಕುರೇಕುಪ್ಪ ಪುರಸಭೆ ಮುಖ್ಯಾಧಿಕಾರಿ ಅರುಣಕುಮಾರ್ ಹೇಳಿದರು.

ತಾಲೂಕಿನ ತೋರಣಗಲ್ಲುಹೋಬಳಿಯ ಕುರೇಕುಪ್ಪ ಪುರಸಭೆಯಲ್ಲಿಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

ಪುರಸಭೆ ಅಧ್ಯಕ್ಷ ಕೆ.ಸೂರ್ಯನಾರಾಯಣ, ಸದಸ್ಯ ಎನ್ .ಸೋಮಪ್ಪ ಮಾತನಾಡಿ, ‘‘ಪೌರ ಕಾರ್ಮಿಕರು ತಮ್ಮ ಆರೋಗ್ಯ ಪಣಕ್ಕಿಟ್ಟು ಪ್ರತಿದಿನ ನಸುಕಿನಲ್ಲೇ ಪಟ್ಟಣದಲ್ಲಿಸ್ವಚ್ಛತೆ ಹಮ್ಮಿಕೊಳ್ಳುವುದರಿಂದ ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರಿತು ಅವರನ್ನು ಗೌರವದಿಂದ ನಡೆಸಿಕೊಳ್ಳೋಣ. ಸರಕಾರದಿಂದ ಪೌರ ಕಾರ್ಮಿಕರಿಗೆ ಸಿಗಬಹುದಾದ ಎಲ್ಲಸೌಕರ್ಯಗಳನ್ನು ಒದಗಿಸಲು ಸಹಕಾರ ನೀಡಲಾಗುವುದು,’’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕಲ್ಗುಡೆಪ್ಪ, ಸದಸ್ಯರಾದ ಬಸವನಗೌಡ, ಲಕ್ಷಿತ್ರ್ಮ ವಸಗೇರಪ್ಪ, ಕುಮಾರಪ್ಪ, ಜ್ಯೋತಿ ನಾರಾಯಣ, ಪುರಸಭೆ ವ್ಯವಸ್ಥಾಪಕ ವೆಂಕಟೇಶ್ , ಪೌರ ಸೇವಾ ನೌಕರರ ಪುರಸಭೆ ಘಟಕದ ಅಧ್ಯಕ್ಷ ಬಸವರಾಜ್ , ಸಿಬ್ಬಂದಿ ಕುಮಾರಿ ನಿಹಾರಿಕಾ, ಹೊನ್ನೂರಪ್ಪ, ಹರ್ಷ, ಪ್ರಶಾಂತ, ಶ್ರೀನಿವಾಸ, ಸುರೇಶ, ಪೌರಕಾರ್ಮಿಕರಾದ ದೊಡ್ಡಬಸಪ್ಪ, ವಿರೂಪಾಕ್ಷಪ್ಪ, ಪಂಪಾಪತಿ ಸೇರಿ ಇತರರು ಇದ್ದರು.

* ಬಿಎಲ್ ವೈ 23 ಎಸ್ಡಿಆರ್ 4:

ಕುರೇಕುಪ್ಪದ ಪುರಸಭೆ ಕಚೇರಿಯಲ್ಲಿಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.