ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಬೇಲೂರು ತಾಲೂಕು ಅರೇಹಳ್ಳಿ ಭಾಗದ ಹಿರಿಯ ವೀರಶೈವ ಮುಖಂಡ ನಟರಾಜ್ ಐಸಾಮಿಗೌಡ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿಗುರುವಾರ ನಡೆದ ಮಹತ್ವದ ಸಭೆಯಲ್ಲಿಜಿಲ್ಲಾಮತ್ತು ತಾಲೂಕು ಘಟಕಗಳನ್ನು ಪುನಾರಚನೆ ಮಾಡಲಾಗಿದೆ.
ಜಿಲ್ಲಾಧ್ಯಕ್ಷರಾಗಿ ನಟರಾಜ್ ಐಸಾಮಿಗೌಡ, ಗೌರವ ಅಧ್ಯಕ್ಷರಾಗಿ ಬಿ.ಎ. ಜಗನ್ನಾಥ್ ಹಾಗೂ ಕಾರ್ಯಾಧ್ಯಕ್ಷರಾಗಿ ಬಾಣಾವರ ಅಶೋಕ್ , ಕಾರ್ಯದರ್ಶಿಯಾಗಿ ಹನುಮಂತಪುರದ ರಾಮಚಂದ್ರು, ಜಿಲ್ಲಾಜೆಡಿಎಸ್ ಕಾರ್ಯದರ್ಶಿಯಾಗಿ ನಗರಸಭೆ ಮಾಜಿ ಸದಸ್ಯ ಕ್ರಾಂತಿ ಅವರನ್ನು ನೇಮಕ ಮಾಡಲಾಗಿದೆ. ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ನಟರಾಜ್ ಐಸಾಮಿಗೌಡ ಅವರು ಹಿರಿಯ ಲೆಕ್ಕ ಪರಿಶೋಧಕ ಹಾಗೂ ವೀರಶೈವ ಸಮಾಜದ ಮುಖಂಡ ಐಸಾಮಿಗೌಡ ಅವರ ಪುತ್ರ. ಐಸಾಮಿಗೌಡ ಕುಟುಂಬವು ದೇವೇಗೌಡ ಕುಟುಂಬದೊಂದಿಗೆ ಹಲವು ವರ್ಷಗಳಿಂದ ನಿಕಟ ಬಾಂಧವ್ಯ ಹೊಂದಿದೆ. ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಐಸಾಮಿಗೌಡ ಅವರ ಪತ್ನಿ ಜಿಲ್ಲಾಪಂಚಾಯಿತಿ ಬೇಲೂರು ತಾಲೂಕಿನ ಅರೇಹಳ್ಳಿ ಭಾಗದಲ್ಲಿಪಕ್ಷದ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಟರಾಜ್ ಅವರನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಅಂತೆಯೇ ದೇವೇಗೌಡರ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿರುವ ಬಿ.ಎ. ಜಗನ್ನಾಥ್ ಅವರಿಗೆ ಜಿಲ್ಲಾಗೌರವಾಧ್ಯಕ್ಷ ಸ್ಥಾನ ನೀಡಲಾಗಿದೆ. ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಅವರನ್ನು ಜಿಲ್ಲಾಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಅರಸೀಕೆರೆಯಲ್ಲಿಪಕ್ಷ ಸಂಘಟನೆ ಜವಾಬ್ದಾರಿ ವಹಿಸಲಾಗಿದೆ.