ವಿಶೇಷ ಪ್ಯಾಕೇಜ್ ಘೋಷಣೆಗೆ ಮನವಿ

Contributed by: prk.k73@gmail.com|Vijaya Karnataka•
special package needed for mulbagal taluk
ವಿಕ ಸುದ್ದಿಲೋಕ ಮುಳಬಾಗಲು

ಬರಗಾಲ ಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆಂಧ್ರ ಗಡಿಭಾಗದಲ್ಲಿಇರುವ ತಾಲೂಕಿನಲ್ಲಿಬರಗಾಲ ಹೆಚ್ಚಿನ ರೀತಿಯಲ್ಲಿಇದ್ದು ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ಸಮೃದ್ಧಿ ಮಂಜುನಾಥ್ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿಗುರುವಾರ ಮಾತನಾಡಿ, ತಾಲೂಕಿನಲ್ಲಿ803 ಕೆರೆಗಳು ಇದ್ದು ಶೇ.90ರಷ್ಟು ಕೆರೆಗಳು ಬತ್ತಿಹೋಗಿವೆ. ಇದರಿಂದ ಸಾರ್ವಜನಿಕರಿಗೆ ಕುಡಿಯಲು ನೀರು ಹಾಗೂ ಜಾನುವಾರುಗಳಿಗೆ ನೀರು ಮತ್ತು ಮೇವು ಇಲ್ಲದೆ ತುಂಬ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಲೂಕಿನಲ್ಲಿಯಾವುದೇ ನದಿ ನಾಲೆಗಳು ಇಲ್ಲದ ಕಾರಣ ಇಲ್ಲಿನ ರೈತರು ಮಳೆ ನೀರನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಹಾಗೂ ರೈತರಿಂದ ಖರೀದಿ ಹಾಲಿಗೆ ಬೆಂಬಲ ಬೆಲೆ ಕೂಡಲೇ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರಲ್ಲದೆ ರಾಜ್ಯ ಸರಕಾರ ರೈತರ ಪರವಾಗಿ ಕೆಲಸ ಮಾಡಬೇಕಾಗಿದೆ ಯಾವುದೇ ಕಾರಣಕ್ಕೂ ನಿರ್ಲಕ್ಷತ್ರ್ಯ ತೋರಿಸಬಾರದೆಂದು ಒತ್ತಾಯಿಸಿದರು.

ಮುಳಬಾಗಲು ನಗರದಲ್ಲಿ164 ಬೋರ್ ವೆಲ್ ಗಳು ಇದ್ದು ಬಹುತೇಕ ಬೋರ್ ವೆಲ್ ಗಳಲ್ಲಿನೀರು ಇಲ್ಲದೆ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಟ್ಯಾಂಕರ್ ನಲ್ಲಿನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತವಾಗುತ್ತಿರುವುದರಿಂದ ರೈತರು ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಕಷ್ಟ ಅನುಭವಿಸುವಂತಾಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು 100 ದಿನ ಕಳದಿದೆ ಇವರ ಬಗ್ಗೆ ನಮಗೆ ಹೆಚ್ಚಿನ ಭರವಸೆ ಇದ್ದು ಗಡಿಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು.

24ಎಂಬಿಎಲ್ ಫೋಟೊ 3 ಶಾಸಕ ಸಮೃದ್ಧಿ ಮಂಜುನಾಥ್ .